ಹಾಂಕಾಂಗ್ ನಲ್ಲಿರೋ ಕೆನಡಾ ಪ್ರಜೆಗಳಿಗೆ ಎಚ್ಚರಿಕೆ ಸಂದೇಶ!

masthmagaa.com:

ಚೀನಾ ಬಿಗಿ ಮುಷ್ಟಿಯಲ್ಲಿ ನಲುಗಿತ್ತಿರೋ ಹಾಂಕಾಂಗ್ ನಲ್ಲಿರೋ ತನ್ನ ನಾಗರಿಕರಿಗೆ ಕೆನಡಾ ಸರ್ಕಾರ ಎಚ್ಚರಿಕೆ ಜಾರಿ ಮಾಡಿದೆ. ‘ಚೀನಾ ಸರ್ಕಾರ ಹಾಂಕಾಂಗ್ ನಲ್ಲಿ ಹೊಸ ಕಾನೂನು ಜಾರಿ ಮಾಡಿದೆ. ಅದರ ಅನ್ವಯ ನೀವು ಹಾಂಕಾಂಗ್ ನಿಂದ ಹೊರ ಬರಬೇಕು ಅಂತಾ ಹೊರಟಾಗ ಅವರು ನಿಮ್ಮನ್ನ ಹೊರ ಬರಲು ಬಿಡದೆ ಇರಬಹುದು. ನಿಮ್ಮ ಮೇಲೆ ಎಕ್ಸಿಟ್ ಬ್ಯಾನ್ ಹೇರಬಹುದು’ ಅಂತ ಕೆನಡಾ ಎಚ್ಚರಿಕೆ ನೀಡಿದೆ. ಈ ಹಿಂದೆ ಅಮೆರಿಕ, ಬ್ರಿಟನ್ ತಮ್ಮ ಪ್ರಜೆಗಳಿಗೆ ಇದೇ ಥರದ ಎಚ್ಚರಿಕೆ ನಿಡಿದ್ದವು. ಆದ್ರೆ ಕೆನಡಾ ಇದೇ ಮೊದಲ ಬಾರಿಗೆ ಚೀನಾಗೆ ಚೀ ಚೀ ಅಂದಿದೆ.
ಅಂದಹಾಗೆ ತನ್ನ ದೇಶದಲ್ಲಿರೋ ವಿದೇಶಿ ಉದ್ಯಮಿಗಳು, ಚಳುವಳಿಗಾರರು, ಮೀಡಿಯಾದವ್ರ ಮೇಲೆ ಈ ಕಾನೂನು ಬಳಸುತ್ತೆ ಚೀನಾ ಸರ್ಕಾರ. ತನ್ನ ಕಮ್ಯೂನಿಸ್ಟ್ ಪ್ರಭುತ್ವದ ವಿರುದ್ದ ಯಾರೆಲ್ಲ ಒಂಚೂರು ಕೆಮ್ಮಬಹುದು ಅನಿಸುತ್ತೋ ಅಂತವರನ್ನ ದೇಶಬಿಟ್ಟು ಹೋಗದಂತೆ ಮಾಡಲು ಈ ಕಾನೂನು ಬಳಸಿಕೊಳ್ಳುತ್ತೆ.

-masthmagaa.com

Contact Us for Advertisement

Leave a Reply