ಮೋದಿಯನ್ನ ಹೊಗಳಿದ ಪುಟಿನ್‌! 45 ಸೆಕೆಂಡ್‌ಗಳ ವಿಡಿಯೋದಲ್ಲಿ ಏನಿತ್ತು?

masthmagaa.com:

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಪ್ರಧಾನಿ ನರೇಂದ್ರ ಮೋದಿಯವ್ರನ್ನ ಬಾಯ್ತುಂಬಾ ಹೊಗಳಿರೋ ವಿಡಿಯೋ ಇದೀಗ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಈ ವಿಡಿಯೋದಲ್ಲಿ ಪುಟಿನ್‌, ʻಭಾರತ ಮತ್ತು ರಷ್ಯಾ ನಡುವಿನ ಸಂಬಂಧ ಎಲ್ಲಾ ತರಹದಲ್ಲೂ ನಿರಂತರವಾಗಿ ಬೆಳವಣಿಗೆ ಕಾಣ್ತಿದೆ. ಇದಕ್ಕೆ ಪ್ರಧಾನಿ ಮೋದಿಯವ್ರ ನೀತಿಯೇ ಪ್ರಮುಖ ಗ್ಯಾರಂಟಿಯಾಗಿದೆ. ಪ್ರಧಾನಿ ಮೋದಿಯವ್ರು ತಮ್ಮ ದೇಶದ ಭದ್ರತೆ ಹಾಗೂ ಭಾರತೀಯ ಜನರ ಹಿತಾಸಕ್ತಿಯನ್ನ ಕಾಪಾಡೋದಕ್ಕೆ ತೆಗೆದುಕೊಳ್ಳೋ ಕಠಿಣ ನಿರ್ಧಾರಗಳ ಬಗ್ಗೆ ನನಗೆ ಯಾವಾಗ್ಲೂ ಆಶ್ಚರ್ಯವಾಗುತ್ತೆ. ಭಾರತ ಮತ್ತು ಭಾರತೀಯ ಜನರ ಹಿತಾಸಕ್ತಿ ವಿರುದ್ಧ ಯಾವ್ದೇ ರೀತಿ ನಿರ್ಧಾರ ಅಥ್ವಾ ಆ್ಯಕ್ಷನ್‌ ತೆಗೆದುಕೊಳ್ಳೋಕೆ ಮೋದಿಯವ್ರಿಗೆ ಬೆದರಿಕೆ ನೀಡ್ಬೋದು ಅನ್ನೋ ಬಗ್ಗೆ ನಾನು ಯೋಚ್ನೆ ಕೂಡ ಮಾಡೋಕಾಗಲ್ಲʼ ಅಂತ ಹೇಳಿದ್ದಾರೆ. ಅಂದ್ಹಾಗೆ 45 ಸೆಕೆಂಡ್‌ಗಳ ಈ ವಿಡಿಯೋಗೆ, `X’ನಲ್ಲಿ ಸಾಕಷ್ಟು ವ್ಯೂ ಸಿಕ್ಕಿದ್ದು, ಪುಟಿನ್‌ ಈ ರೀತಿ ಪ್ರಧಾನಿ ಮೋದಿಯವ್ರನ್ನ ಹೊಗಳಿರೋದಕ್ಕೆ ಶ್ಲಾಘನೆ ಕೂಡ ವ್ಯಕ್ತವಾಗಿದೆ. ಇನ್ನು ಈ ವಿಡಿಯೋದಲ್ಲಿ ಪುಟಿನ್‌ ಅವ್ರ ಮಾತುಗಳನ್ನ AI ಬಳಸಿ ಹಿಂದಿಗೆ ಟ್ರಾನ್ಸ್ಲೇಟ್‌ ಮಾಡಲಾಗಿದೆ. ಆದ್ರಿಂದ ಪುಟಿನ್‌ ಅವ್ರು ಹಿಂದಿ ಭಾಷೆಯಲ್ಲೇ ಮಾತನಾಡಿರೋ ಹಾಗೇ ಅನಿಸಿದೆ.

-masthmagaa.com

Contact Us for Advertisement

Leave a Reply