ತಾಯಿಯನ್ನೇ 10 ವರ್ಷ ಕೂಡಿಹಾಕಿದ ಮಕ್ಕಳು!

masthmagaa.com:

ತಮ್ಮ 72 ವರ್ಷದ ವೃದ್ಧ ತಾಯಿಯನ್ನೆ 10 ವರ್ಷಗಳ ಕಾಲ ಮನೆಯಲ್ಲಿ ಕೂಡಿಹಾಕಿದ ಘಟನೆ ತಮಿಳು ನಾಡಿನಲ್ಲಿ ನಡೆದಿದೆ. ಇದೀಗ ಈ ಪ್ರಕರಣ ಸಂಬಂಧ ಆ ತಾಯಿಯ ಮಕ್ಕಳಾದ 50 ವರ್ಷದ ಪೊಲೀಸ್‌ ಇನ್ಸ್ಪೆಕ್ಟರ್‌ ಶಣ್ಮುಗಮ್‌ ಮತ್ತು 45 ವರ್ಷದ ದೂರದರ್ಶನದಲ್ಲಿ ಕೆಲಸ ಮಾಡ್ತಿದ್ದ ಸಿಬ್ಬಂದಿ ವೆಂಕಟೇಶ್‌ ಎಂಬುವವರನ್ನ ಆರೆಸ್ಟ್‌ ಮಾಡಲಾಗಿದೆ. 72 ವರ್ಷದ ವೃದ್ದೆಯನ್ನ ಜ್ಞಾನಜೋತಿ ಎಂದು ಗುರುತಿಸಲಾಗಿದೆ. ಇವರನ್ನ 10 ವರ್ಷಗಳಿಂದ ಇವರ ಇಬ್ಬರು ಮಕ್ಕಳು ಮನೆಯಲ್ಲೆಯೆ ಕೂಡಿಹಾಕಿದ್ರು. ಈ ವೃದ್ದೆ ತನ್ನ ರೂಮಿನಲ್ಲಿ ಬಹಳ ದುರ್ಬಲ ಸ್ಥಿತಿಯಲ್ಲಿ ಮಲಗಿರುವ ವಿಡಿಯೋವನ್ನ ನೋಡಿದ ಅಪರಿಚಿತ ವ್ಯಕ್ತಿಯೊಬ್ರು ಸಮಾಜ ಕಲ್ಯಾಣ ಇಲಾಖೆಗೆ ಫೋನ್‌ ಮಾಡಿದ್ರು. ನಂತರದಲ್ಲಿ ಆ ವೃದ್ದೆಯನ್ನ ರಕ್ಷಿಸಲಾಗಿದ್ದು, ಇದೀಗ ಆಸ್ಪತ್ರೆಗೆ ದಾಖಲಿಸಲಾಗಿದೆ.

-masthmagaa.com

Contact Us for Advertisement

Leave a Reply