ಹಣದುಬ್ಬರದಿಂದ ಬಳಲುತ್ತಿರುವ ಪಾಕ್‌ ಜನರಿಗೆ ಸ್ವಲ್ಪ ಗಂಗಾಜಲ ಬಿಟ್ಟ ಶೆಹಬಾಜ್‌ ಷರೀಫ್‌!

masthmagaa.com:

ಆರ್ಥಿಕ ಸಂಕಷ್ಟ ಹಾಗೂ ಹಣದುಬ್ಬರದಂತ ಸಮಸ್ಯೆಗಳಿಂದ ಕಂಗೆಟ್ಟಿರುವ ಪಾಕಿಸ್ತಾನ ಅಲ್ಲಿನ ಕಡಿಮೆ ಆದಾಯವಿರುವ ಜನ್ರಿಗೆ ಪೆಟ್ರೋಲ್‌ ಸಬ್ಸಿಡಿ ನೀಡೋಕೆ ಮುಂದಾಗಿದೆ. ಹಣದುಬ್ಬರದಿಂದ ಪೆಟ್ರೋಲ್‌ ಬೆಲೆ ಗಗನಕ್ಕೇರಿದ್ದು, ಜನ ಸಾಮಾನ್ಯರು ತೊಂದ್ರೆ ಅನುಭವಿಸುತ್ತಿದ್ದಾರೆ. ಹೀಗಾಗಿ ತಕ್ಕಮಟ್ಟಿಗೆ ಸುಧಾರಣೆ ತರುವ ಸಲುವಾಗಿ ರಿಲೀಫ್‌ ಪ್ಯಾಕೇಜ್‌ ನೀಡಲಾಗುತ್ತೆ ಅಂತ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ ಅನೌನ್ಸ್‌ ಮಾಡಿದ್ದಾರೆ. ಈ ಪ್ಯಾಕೇಜ್‌ನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ 50 ಪಾಕ್‌ ರೂಪಾಯಿ ಸಬ್ಸಿಡಿ ನೀಡಲಾಗುತ್ತೆ ಅಂತ ಷರೀಫ್‌ ಹೇಳಿದ್ದಾರೆ. ಅಂದ್ಹಾಗೆ ಪಾಕಿಸ್ತಾನದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ 272 ಪಾಕ್‌ ರೂಪಾಯಿ ಇದೆ.

-masthmagaa.com

Contact Us for Advertisement

Leave a Reply