ಡ್ರಗ್ಸ್‌ ಪ್ರಕರಣದಲ್ಲಿ ಶಾರುಖ್‌ ಮಗನನ್ನು ಬಂಧಿಸಿದ್ದ ಸಮೀರ್‌ ವಾಂಖೇಡೆಗೆ ಸಿಬಿಐ ಬಿಸಿ !

masthmagaa.com:

ಶಾರುಖ್‌ ಖಾನ್‌ ಅವರ ಪುತ್ರ ಆರ್ಯನ್‌ ಖಾನ್‌ ಅವರನ್ನು ಡ್ರಗ್ಸ್‌ ಪ್ರಕರಣದಲ್ಲಿ ಬಂಧಿಸಿಲಾಗಿತ್ತು. ಇದೀಗ ಈ ಪ್ರಕರಣದಲ್ಲಿ ಆರ್ಯನ್‌ ಖಾನ್‌ ಅವರನ್ನು ಬಂಧಿಸಿದಂತಹ ಮಾದಕ ವಸ್ತು ನಿಗ್ರಹ ದಳ(ಎನ್‌ಸಿಬಿ) ಅಧಿಕಾರಿ ಸಮೀರ್‌ ವಾಂಖೆಡೆ ವಿರುದ್ಧ ಸಿಬಿಐ ಶುಕ್ರವಾರ ಪ್ರಕರಣ ದಾಖಲಿಸಿಕೊಂಡಿದೆ.

ಐಷಾರಾಮಿ ಹಡಗಿನಲ್ಲಿ ಡ್ರಗ್ಸ್‌ ವ್ಯವಹಾರ ನಡೆಸುತ್ತಿದ್ದರು ಎಂಬ ಆರೋಪದ ಮೇಲೆ ಶಾರುಖ್‌ ಖಾನ್‌ ಅವರ ಪುತ್ರ ಆರ್ಯನ್‌ ಖಾನ್‌ ಅವರನ್ನು ಬಂಧಿಸಲಾಗಿತ್ತು. ಕಂದಾಯ ಇಲಾಖೆ ಅಧಿಕಾರಿ ಸಮೀರ್‌ ವಾಂಖೆಡೆ ಇವರನ್ನು ಬಂಧಿಸಿದ್ದರು. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದ ಆರ್ಯನ್‌ ಖಾನ್‌ ಅವರಿಗೆ ಕ್ಲೀನ್‌ ಚಿಟ್‌ ನೀಡಿ ಬಿಡುಗಡೆ ಮಾಡಲಾಯಿತು. ಬಳಿಕ 25 ಕೋಟಿ ತೆಗೆದುಕೊಂಡು ಸಮೀರ್‌ ವಾಂಖೆಡೆ ಇವರನ್ನು ಪ್ರಕರಣದಿಂದ ಬಿಡುಗಡೆಗೊಳಿಸಿದರು ಎಂಬ ಆರೋಪ ಕೇಳಿಬಂದಿತ್ತು. ಸಮೀರ್‌ ವಾಂಖೆಡೆ ಇವರನ್ನು ಪ್ರಕರಣದಿಂದ ಮುಕ್ತಗೊಳಿಸಲು ಮುಂಗಡವಾಗಿ 50 ಲಕ್ಷವನ್ನು ಸ್ವೀಕರಿಸಿದ್ದರು ಎಂದು ಸಿಬಿಐ ಬಳಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ಸಮೀರ್‌ ವಾಂಖೆಡೆ ಅವರ ಮುಂಬೈ ನಿವಾಸದ ಮೇಲೆ ಸಿಬಿಐ ದಾಳಿ ಮಾಡಿದೆ.

ಈ ಬಗ್ಗೆ ಮಾತನಾಡಿದ ಶಾರುಖ್‌ ಖಾನ್‌ ʻʻಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಬಳಿ ಡ್ರಗ್ಸ್ ಸಿಗದೇ ಇದ್ದರೂ ಬಂಧಿಸಿದ್ದರು. ಬಳಿಕ ಅಂತಾರಾಷ್ಟ್ರೀಯ ಡ್ರಗ್ಸ್ ಪೆಡ್ಲರ್ ರೀತಿ ನೋಡಿಕೊಂಡಿದ್ದರು. ತಪ್ಪಿಲ್ಲದಿದ್ದರೂ ಮಗನನ್ನು ಜೈಲಲ್ಲಿ ಇರಿಸಲಾಯಿತು. ಈ ಆಘಾತದಿಂದ ಮಾನಸಿಕವಾಗಿ ನೊಂದ ಪುತ್ರ ಮಲಗಲೂ ಆಗದೆ, ಇರಲೂ ಆಗದೆ ತೊಳಲಾಡಿದ್ದಾನೆ. ಅಧಿಕಾರಿಗಳು ಆರ್ಯನ್ ಖಾನ್‌ನನ್ನು ಅಪರಾಧಿಯಂತೆ ನೋಡಿಕೊಂಡರು. ಹಲವು ಪ್ರಕರಣಗಳ ಆರೋಪಿಯ ಬಳಿ ಕೇಳುವ ಪ್ರಶ್ನೆಗಳನ್ನು ಕೇಳಿ ಮಾನಸಿಕವಾಗಿ ಕುಗ್ಗುವಂತೆ ಮಾಡಿದ್ದರು. ಈ ಪ್ರಕರಣ ನನ್ನ ಪುತ್ರನ ಮೇಲೆ ಬೀರಿರುವ ವ್ಯತಿರಿಕ್ತ ಪರಿಣಾಮವೇನು ಅನ್ನೋದು ನಮಗೆ ಮಾತ್ರ ಗೊತ್ತುʼʼ ಎಂದು ಹೇಳಿದ್ದರು.

-masthmagaa.com

Contact Us for Advertisement

Leave a Reply