ʻನಟಿ ಶ್ರೀದೇವಿ ಸಾವಿಗೆ ಮೋದಿ ಕಾರಣʼ, CBI ಚಾರ್ಜ್‌ ಶೀಟ್‌ ಸಲ್ಲಿಕೆ!

masthmagaa.com:

ನಟಿ ಶ್ರೀದೇವಿ ಸಾವಿನ ಹಿಂದೆ ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವ್ರ ಕೈವಾಡವಿದೆ ಅಂತ ಆರೋಪಿಸಿದ್ದ ಮಹಿಳೆ ಮೇಲೆ ಇದೀಗ CBI ಚಾರ್ಜ್‌ ಶೀಟ್‌ ಸಲ್ಲಿಸಿದೆ. ಸ್ವಯಂ ಘೋಷಿತ ತನಿಖಾಧಿಕಾರಿ ದೀಪ್ತಿ ಆರ್‌ ಪಿನ್ನೀತಿ ಅನ್ನೋರು ಈ ಹಿಂದೆ ಫೋರ್ಜರಿ ಮಾಡಿರೋ ಪತ್ರಗಳನ್ನ ತೋರಿಸಿ ಈ ರೀತಿ ಆರೋಪ ಮಾಡಿದ್ರು. ಈಕೆ ಆರೋಪ ಮಾಡಿರೋ ವಿಡಿಯೋ ಯುಟ್ಯೂಬ್‌ನಲ್ಲಿ ಕೂಡ ಅಪ್‌ಲೋಡ್‌ ಮಾಡಲಾಗಿತ್ತು. ಈ ವಿಡಿಯೋದಲ್ಲಿ ನಟಿ ಶ್ರೀದೇವಿ ಹಾಗೂ ನಟ ಸುಶಾಂತ್‌ ಸಿಂಗ್‌ ರಜಪುತ್‌ ಅವ್ರ ಸಾವಿಗೆ ಕಾರಣ ಸಂಬಂಧ ಚರ್ಚೆ ನಡೆಸಲಾಗಿತ್ತು. ಇದೇ ವೇಳೆ ದೀಪ್ತಿ ಪಿನ್ನೀತಿ, ಪಿಎಂ ಮೋದಿ, ರಾಜನಾಥ್‌ ಸಿಂಗ್‌ ಮತ್ತು ಯುಎಇ ಸರ್ಕಾರದ ವಿರುದ್ಧ ಆರೋಪ ಮಾಡಿದ್ರು. ನಕಲಿ ಪತ್ರಗಳನ್ನ ತೋರಿಸಿ ಭಾರತ ಮತ್ತು ಯುಎಇ ಸರ್ಕಾರಗಳು ಸೇರ್ಕೊಂಡು ಶ್ರೀದೇವಿ ಸಾವಿನ ಕಾರಣ ಕವರ್‌ ಮಾಡಿದ್ದಾರೆ ಅಂತ ಹೇಳಿದ್ರು. ಈ ಸಂಬಂಧ ಮುಂಬೈ ಮೂಲದ ಚಾಂದನಿ ಶಾ ಅವ್ರು ಈಕೆ ವಿರುದ್ಧ ಕಂಪ್ಲೈಂಟ್‌ ಮಾಡಿದ್ರು. ಸೋ, CBI ಈಕೆ ಮತ್ತು ಈಕೆಯ ವಕೀಲ ಭರತ್‌ ಸುರೇಶ್‌ ಕಾಮತ್‌ ವಿರುದ್ಧ ಕಳೆದ ವರ್ಷವೇ ಕೇಸ್‌ ದಾಖಲಿಸಿತ್ತು. ತನಿಖೆ ನಡೆಸಿದ್ದ CBI ಈಕೆ ನೀಡಿರೋ ದಾಖಲೆಗಳು ಮತ್ತು ಪತ್ರಗಳೆಲ್ಲಾ ನಕಲಿ ಅಂತ ಸ್ಪೆಷಲ್‌ ಕೋರ್ಟ್‌ ಮುಂದೆ ರಿಪೋರ್ಟ್‌ ಸಲ್ಲಿಸಿದೆ. ನಂತ್ರ ಇದೀಗ ದೀಪ್ತಿ ಅವ್ರ ಮೇಲೆ CBI ಚಾರ್ಜ್‌ ಶೀಟ್‌ ಫೈಲ್‌ ಮಾಡಿದೆ.

-masthmagaa.com

Contact Us for Advertisement

Leave a Reply