ವಿಮಾನದೊಳಗೆ ಮೊಬೈಲ್​​ನಲ್ಲಿ ಬೆಂಕಿ! ಆತಂಕವೋ ಆತಂಕ!

masthmagaa.com:

ಅಲಾಸ್ಕಾ ಏರ್​ಲೈನ್ಸ್​​ಗೆ ಸೇರಿದ ವಿಮಾನ ಫ್ಲೈಟ್ 751ನಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪ್ರಯಾಣಿಕರೊಬ್ಬರ ಮೊಬೈಲ್ ಫೋನ್​ಗೆ ಬೆಂಕಿ ಹೊತ್ತಿ, ಕೆಲಕಾಲ ಗಲಿಬಿಲಿ ಉಂಟಾಗಿತ್ತು. ವಿಮಾನ ಅಮೆರಿಕ ನ್ಯೂ ಆರ್ಲಿಯಾನ್ಸ್​​ನಿಂದ ಸೀಯಾಟಲ್​​ಗೆ ಪ್ರಯಾಣ ಬೆಳೆಸಿತ್ತು. ಸಿಯಾಟಲ್​​ನ ಟ್ಯಾಕೋಮಾ ಇಂಟರ್​​ನ್ಯಾಷನಲ್​ ಏರ್​ಪೋರ್ಟ್​​ನಲ್ಲಿ ಇನ್ನೇನು ಲ್ಯಾಂಡ್ ಆಗಬೇಕು ಅನ್ನುವಷ್ಟರಲ್ಲಿ ಪ್ರಯಾಣಿಕರೊಬ್ಬರ ಸ್ಮಾರ್ಟ್​ ಫೋನ್ ಭಗ್ಗನೆ ಬೆಂಕಿ ಹೊತ್ತಿಕೊಂಡು ಉರಿಯೋಕೆ ಶುರುವಾಯ್ತು. ಯಾವ ಮಟ್ಟಿಗೆ ಅಂದ್ರೆ ಫೈರ್ ಎಸ್ಟಿಂಗ್ವಿಷರ್ ಅಥವಾ ಈ ಅಗ್ನಿಶಾಮಕ ಉಪಕರಣಗಳನ್ನು ಬಳಸೋಮಟ್ಟಿಗೆ..! ಜೊತೆಗೆ ಬ್ಯಾಟರಿ ಕಂಟೋನ್ಮೆಂಟ್ ಪೆಟ್ಟಿಗೆಯನ್ನು ತಂದು ಅಳಿದುಳಿದ ಮೊಬೈಲ್​ನ್ನು ಒಳಗೆ ಹಾಕಿ ಬಂದ್ ಮಾಡಬೇಕಾಯ್ತು. ಕೆಲ ಕ್ಷಣಗಳಲ್ಲಿ ವಿಮಾನ ಲ್ಯಾಂಡ್ ಆಯ್ತಾದ್ರೂ ವಿಮಾನದ ಒಳಗೆ ದೊಡ್ಡ ಪ್ರಮಾಣದಲ್ಲಿ ಹೊಗೆ ತುಂಬಿಕೊಂಡಿದ್ದ ಕಾರಣ ನಾರ್ಮಲ್ ಆಗಿ ನಿಧಾನಕ್ಕೆ ವಿಮಾನದಿಂದ ಪ್ರಯಾಣಿಕರನ್ನು ಕೆಳಗಿಳಿಸೋದು ಸಾಧ್ಯವಿರಲಿಲ್ಲ. ಹೀಗಾಗಿ ಇವ್ಯಾಕ್ಯುವೇಷನ್ ಸ್ಲೈಡ್ಸ್​ ಬಳಸಿ ಎಮರ್ಜೆನ್ಸಿಯಾಗಿ ಪ್ರಯಾಣಿಕರನ್ನು ಕೆಳಗಿಳಿಸಬೇಕಾಯ್ತು ಅಂತ ಅಲಾಸ್ಕಾ ಏರ್​ಲೈನ್ಸ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಇವ್ಯಾಕ್ಯುವೇಷನ್ ಸ್ಲೈಡ್ಸ್ ಅಂದ್ರೆ ಮೆಟ್ಟಿಲುಗಳ ಬದಲಾಗಿ ಈ ರೀತಿ, ಜಾರುಬಂಡಿಯ ರೀತಿ ವ್ಯವಸ್ಥೆ ಮಾಡಿ, ಪ್ರಯಾಣಿಕರನ್ನು ಕೆಳಗಿಳಿಸೋದು.

-masthmagaa.com

Contact Us for Advertisement

Leave a Reply