ಕೊರೋನಾ ಸುಳಿಯಲ್ಲಿರೋ ಕೇರಳಕ್ಕೆ ನಿಫಾ ಭೀತಿ!

masthmagaa.com:

ಈಗಾಗಲೇ ಕೊರೋನಾ ಹಾವಳಿಯಿಂದ ಕಂಗೆಟ್ಟಿರೋ ಕೇರಳದಲ್ಲೀಗ ನಿಫಾ ಭೀತಿ ಆವರಿಸಿದೆ. ಇಲ್ಲಿ 12 ವರ್ಷದ ಬಾಲಕನೊಬ್ಬ ನಿಫಾ ವೈರಸ್​​ಗೆ ಬಲಿಯಾಗಿದ್ಧಾನೆ ಅಂತ ಆರೋಗ್ಯ ಸಚಿವೆ ವೀಣಾ ಜಾರ್ಜ್​ ಮಾಹಿತಿ ನೀಡಿದ್ದಾರೆ. ಬಾಲಕನ ಸ್ಯಾಂಪಲ್​​ನ್ನು ಪುಣೆಯ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾಗಿದೆ. ಅದ್ರ ವರದಿಯಲ್ಲಿ ನಿಫಾ ವೈರಸ್ ಬಂದಿರೋದು ದೃಢವಾಗಿದೆ. ಅದ್ರ ಬೆನ್ನಲ್ಲೇ ಕೇಂದ್ರ ಸರ್ಕಾರ ನ್ಯಾಷನಲ್ ಸೆಂಟರ್ ಫರ್ ಡಿಸೀಸ್ ಕಂಟ್ರೋಲ್​ನ ತಂಡವನ್ನು ಕೇರಳಕ್ಕೆ ಕಳುಹಿಸಿದೆ. ಬಾಲಕನ ಸಂಪರ್ಕಕ್ಕೆ ಬಂದಿದ್ದ ಎಲ್ಲರನ್ನೂ ಟ್ರೇಸ್ ಮಾಡಲಾಗಿದೆ. ಅಂದಹಾಗೆ ನಿಫಾ ಒಂದು ಭಯಾನಕ ವೈರಸ್​​.. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಇದು ಕೇರಳದ ಕೊಝಿಕೋಡ್​ನಲ್ಲಿ 2018ರ ಮೇ ತಿಂಗಳಲ್ಲಿ ಪತ್ತೆಯಾಗಿತ್ತು. ಈ ವೇಳೆ ಒಟ್ಟು 17 ಮಂದಿ ಪ್ರಾಣ ಕಳೆದುಕೊಂಡಿದ್ರು. ಈ ವೈರಾಣು ಬಾವಲಿಗಳ ಜೊಲ್ಲಿನ ಮೂಲಕ ಮನುಷ್ಯರಿಗೆ ಹರಡೋ ಒಂದು ವೈರಾಣುವಾಗಿದೆ. ಜ್ವರ, ತಲೆ ನೋವು, ಮೆದುಳು ಊದಿಕೊಳ್ಳೋದು, ಅರೆನಿದ್ರಾವಸ್ಥೆ, ಮಾನಸಿಕ ಗೊಂದಲ ಇದ್ರ ಪ್ರಮುಖ ಲಕ್ಷಣಗಳಾಗಿವೆ.

-masthmagaa.com

Contact Us for Advertisement

Leave a Reply