ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಹೇಳಿದ್ದೇನು?

masthmagaa.com:

ಅಗತ್ಯವಸ್ತುಗಳ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಇವತ್ತು ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಕಾರ್ಯದರ್ಶಿ ಸುಧಾಂಶು ಪಾಂಡೆ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಮಧ್ಯಪ್ರವೇಶದಿಂದ ಸರಕುಗಳ ಬೆಲೆ ಬೇರೆ ದೇಶಕ್ಕೆ ಹೋಲಿಸಿದ್ರೆ ನಮ್ಮ ದೇಶದಲ್ಲಿ ಫಾಸ್ಟಾಗಿ ಕಮ್ಮಿಯಾಗ್ತಿದೆ ಎಂದಿದ್ದಾರೆ. ಜೊತೆಗೆ ಎಣ್ಣೆಕಾಳು ಮತ್ತು ಆಹಾರ ಧಾನ್ಯಗಳ ಆಮದನ್ನ ಹೆಚ್ಚಿಸುವ ಮೂಲಕ ಮತ್ತು ಆಹಾರ ವಸ್ತುಗಳ ದಾಸ್ತಾನನ್ನ ಪರಿಶೀಲಿಸುವಂತೆ ರಾಜ್ಯ ಸರ್ಕಾರಗಳು ಸೂಚಿಸುವ ಮೂಲಕ ಬೆಲೆ ಏರಿಕೆಯನ್ನ ಕಂಟ್ರೋಲ್​ ಮಾಡ್ತಿದ್ದೀವಿ. ಇಂಡೋನೇಷ್ಯಾ, ಮಲೇಷ್ಯಾ ಮುಂತಾದ ಕಡೆ ಕಾರ್ಮಿಕರ ಕೊರತೆಯಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲದ ಬೆಲೆ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪಾಮ್ ಆಯಿಲ್​ ರೇಟ್ ಜಾಸ್ತಿಯಾಗ್ತಿದೆ. ಆದ್ರೆ ಭಾರತದಲ್ಲಿ ಕಮ್ಮಿಯಾಗ್ತಿದೆ. ಅಲ್ಲದೆ ಭಾರತದಲ್ಲಿ ಸಾವಿವೆ ಎಣ್ಣೆಯ ಉತ್ಪಾದನೆ ಹೆಚ್ಚಾಗಿದೆ. ಹೀಗಾಗಿ ಸಾಸಿವೆ ಎಣ್ಣೆ ರೇಟ್​ ಕೂಡ ಕಮ್ಮಿಯಾಗುವ ನಿರೀಕ್ಷೆ ಇದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ, ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ತೊಗರಿ ಬೇಳೆಯನ್ನ ಆಮದು ಮಾಡಿಕೊಂಡಿದ್ದೀವಿ. ಇಂಥಾ ನಿರಂತರ ಪ್ರಯತ್ನಗಳಿಂದ ಬೆಲೆ ಏರಿಕೆಯನ್ನ ನಿಯಂತ್ರಿಸಿದ್ದೀವಿ ಎಂದಿದ್ದಾರೆ.

-masthmagaa.com

Contact Us for Advertisement

Leave a Reply