ಸಿಇಟಿ ಪರೀಕ್ಷೆ ದಿನಾಂಕ ಘೋಷಣೆ.. ಯಾವತ್ತು ಯಾವ ಪರೀಕ್ಷೆ?

masthmagaa.com:

ಕರ್ನಾಟಕದ ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆ ಆಗಸ್ಟ್‌ 28, 29 ರಂದು ನಡೆಸಲಾಗುತ್ತೆ ಅಂತ ಡಿಸಿಎಂ/ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್‌ ನಾರಯಣ್‌ ಹೇಳಿದ್ದಾರೆ. ಮೊದಲ ದಿನ ಗಣಿತ ಮತ್ತು ಜೀವಶಾಸ್ತ್ರ ಪರೀಕ್ಷೆ ನಡೆಸಲಾಗುತ್ತೆ. ಎರಡನೇ ದಿನ ಕೆಮೆಸ್ಟ್ರಿ ಮತ್ತು ಫಿಸಿಕ್ಸ್​​​ ಪರೀಕ್ಷೆ ನಡೆಸಲಾಗುತ್ತೆ. 3ನೇ ದಿನ ಗಡಿನಾಡು ಹಾಗೂ ಹೊರನಾಡ ವಿದ್ಯಾರ್ಥಿಗಳಿಗೆ ಕನ್ನಡ ಪರೀಕ್ಷೆ ನಡೆಯುತ್ತೆ ಅಂತ ಹೇಳಿದ್ದಾರೆ. ಜೂನ್‌ 15ರಂದು ಸಿಇಟಿ ನೋಂದಾವಣೆ ಪ್ರಾರಂಭವಾಗುತ್ತೆ. ವಿಜ್ಞಾನಕ್ಕೆ ಸಂಬಂಧಪಟ್ಟ ಎಲ್ಲಾ ವೃತ್ತಿಪರ ಕೋರ್ಸ್‌ಗಳಿಗೂ ಸಿಇಟಿ ಅಂಕವನ್ನು ಮಾನದಂಡವಾಗಿ ಪರಿಗಣಿಸಲಾಗುತ್ತೆ. ಸಿಇಟಿ ಪರೀಕ್ಷೆಗೆ ದ್ವಿತೀಯ ಪಿಯುಸಿ ಅಂಕಗಳನ್ನ ಪರಿಗಣಿಸಲಾಗುವುದಿಲ್ಲ. ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಎಲ್ಲಾ ಮಕ್ಕಳು ಪಾಸ್‌ ಆಗಿರುವ ಕಾರಣ ಪದವಿ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳು ಹೆಚ್ಚಾಗಿ ಹೋಗುವ ಸಾಧ್ಯತೆ ಇರುತ್ತೆ. ಈಗ ಮಾಡಿದ ನಿರ್ಧಾರದಂತೆಯೇ ಪರೀಕ್ಷೆಯನ್ನ ನಡೆಸಲಾಗುತ್ತೆ ಅಂತ ಅಶ್ವತ್ಥ್‌ ನಾರಯಣ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply