ಚಿತ್ರರಂಗದಲ್ಲಿ 20 ವರ್ಷ ಪೂರೈಸಿದ ಮೋಹಕ ತಾರೆ ರಮ್ಯಾ !

masthmagaa.com:

ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿ ರಮ್ಯಾ ಸಿನಿಮಾರಂಗಕ್ಕೆ ಕಾಲಿಟ್ಟು ಇವತ್ತಿಗೆ 20 ವರ್ಷಗಳು ತುಂಬಿವೆ. ಈ ಬಗ್ಗೆ ರಮ್ಯಾ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿಕೊಂಡು ರಾಜ್‌ ಕುಟುಂಬಕ್ಕೆ ಅಭಿನಂದನೆ ತಿಳಿಸಿದ್ದಾರೆ.ಅವರ ಮೊದಲ ಸಿನಿಮಾ ʻಅಭಿʼ ಚಿತ್ರೀಕರಣದ ದಿನಗಳನ್ನು ನೆನಪಿಸಿಕೊಂಡು ನಾಲ್ಕು ಪೋಟೋ ಹಂಚಿಕೊಂಡಿದ್ದಾರೆ.

ಅಭಿ ಮೊದಲು ಶೂಟಿಂಗ್‌ ಸೆಂಟ್‌ ಜೋಸೆಫ್‌ ಕಾಲೇಜಿನಲ್ಲಿ ಶುರುವಾಗಿತ್ತು ಅಂದಿನ ಪೋಟೋ, ಚಿಕ್ಕಮಗಳೂರಿನಲ್ಲಿ ಅಭಿ ಸಿನಿಮಾ ಚಿತ್ರೀಕರಣದ ಕೊನೆಯ ದಿನದ ಪೋಟೋ, ರಮ್ಯಾ ಅವರ ತಂದೆ ಅಭಿ ಸಿನಿಮಾದ ಖುಷಿಗಾಗಿ ಏರ್ಪಡಿಸಿದ ಪಾರ್ಟಿಯಲ್ಲಿನ ಪೋಟೋ ಹಾಗೂ ಅಭಿ ಸಿನಿಮಾ ಯಶಸ್ವಿಯಾಗಿ 100 ದಿನ ಪುರೈಸಿದ ದಿನದಂದು ಡಾ. ರಾಜಕುಮಾರ್‌ ಅವರಿಂದ ಆಶೀರ್ವಾದ ಪಡೆಯುತ್ತಿರುವ ಪೋಟೋ.

ಈ ನಾಲ್ಕು ಪೋಟೋ ಹಂಚಿಕೊಂಡು ʻಸಿನಿಮಾ ಚಿತ್ರೀಕರಣದ ಮೊದಲ ದಿನ ಬಹಳ ಅತ್ತಿದ್ದೆ ಏಕೆಂದರೆ ನಾನು ಅಂದು ಬಹಳ ನರ್ವಸ್ ಆಗಿದ್ದೆ. ಅದಾದ ಬಳಿಕ ಚಿತ್ರೀಕರಣದ ಕೊನೆಯ ದಿನವೂ ಬಹಳ ಅತ್ತಿದ್ದೆ ಏಕೆಂದರೆ ಇಡೀ ತಂಡವನ್ನು ನಾನು ಬಹಳ ಹಚ್ಚಿಕೊಂಡು ಬಿಟ್ಟಿದ್ದೆʼ ಎಂದಿದ್ದಾರೆ.

“ನನ್ನ ಮೊದಲ ಚಿತ್ರ , ಅಪ್ಪು ಅವರ ಜೊತೆಗಿನ ‘ಅಭಿ’ ಬಿಡುಗಡೆ ಆಗಿ ಇಂದಿಗೆ 20 ವರ್ಷಗಳು. ನನ್ನ ಅಭಿಮಾನಿಗಳ ಹಾಗೂ ಹಿತೈಷಿಗಳ ಕಡೆಯಿಂದ ಇಲ್ಲಿಯವರೆಗೂ ನಾನು ಪಡೆದಿರುವ ನಿರಂತರ ಪ್ರೀತಿಗೆ ನನ್ನ ಹೃದಯವು ಕೃತಜ್ಞತೆಯಿಂದ ತುಂಬಿದೆ. ನನಗೆ ಅವಕಾಶ ಕೊಟ್ಟ ರಾಜ್ ಕುಟುಂಬಕ್ಕೆ ನಾನು ಸದಾ ಚಿರಋಣಿ ಮತ್ತು ನನ್ನ ಸುದೀರ್ಘ ಸಿನಿ ಪಯಣದಲ್ಲಿ ನನ್ನೊಂದಿಗೆ ಕೆಲಸ ಮಾಡಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು” ಎಂದು ರಮ್ಯಾ ಬರೆದುಕೊಂಡಿದ್ದಾರೆ.

ಇವತ್ತಿಗೆ ಅಭಿ ಸಿನಿಮಾ ರಿಲೀಸ್ ಆಗಿ 20 ವರ್ಷಗಳಾಗಿವೆ. ನನಗೆ ಪ್ರೀತಿ ಅಭಿಮಾನ ಕೊಟ್ಟು ಬೆಳಿಸಿದಂತಹ ಎಲ್ಲಾ ಅಭಿಮಾನಿಗಳಿಗೂ ಧನ್ಯವಾದಗಳು. ನನಗೆ ಅವಕಾಶ ನೀಡಿದಂತಹ ರಾಜ್‌ ಕುಟುಂಬಕ್ಕೆ ತುಂಬ ಧನ್ಯವಾದಗಳು ಎಂದು ಹೇಳಿದ ರಮ್ಯಾ, ಕೊನೆಯಲ್ಲಿ ವಿಶೇಷ ಸೂಚನೆಯಾಗಿ ಅಪ್ಪು ನನ್ನ ಮೊಟ್ಟ ಮೊದಲ ಆತ್ಮೀಯ ಗೆಳೆಯನಾಗಿ ಹಾಗೂ ನನ್ನ ಅತ್ಯಂತ ನೆಚ್ಚಿನ ಸಹನಟನಾಗಿ ಸದಾ ಕಾಲ ಉಳಿಯಲಿದ್ದಾರೆ ಎಂದಿದ್ದಾರೆ.

-masthmagaa.com

Contact Us for Advertisement

Leave a Reply