ಯಾರಾಗ್ತಾರೆ ಸಿಬಿಐನ ಹೊಸ ಮುಖ್ಯಸ್ಥ?

masthmagaa.com:

ಕೇಂದ್ರೀಯ ತನಿಖಾ ದಳ ಅಂದ್ರೆ ಸಿಬಿಐ ನ ಮುಂದಿನ ನಿರ್ದೇಶಕರ ಆಯ್ಕೆ ಮಾಡಲು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತ ಮಟ್ಟದ ಸಮಿತಿಯ ಸಭೆ‌, ಪ್ರಧಾನ ಮಂತ್ರಿ ನಿವಾಸದಲ್ಲಿ ನಡೆದಿದೆ. 1984, 1985 ಹಾಗೂ 1986 ರ ಬ್ಯಾಚ್‌ ನ ಅಧಿಕಾರಿಗಳಲ್ಲಿ ಒಬ್ರು ಆಯ್ಕೆ ಆಗ್ತಾರೆ ಎನ್ನಲಾಗಿದೆ. ಹುದ್ದೆಗೆ ರಾಕೇಶ್‌ ಅಸ್ತಾನಾ, ವೈಸಿ ಮೋದಿ ಮತ್ತು ಸುಬೋಧ್‌ ಜೈಸ್ವಾಲ್‌ ಅವರ ಹೆಸರು ಮುಂಚೂಣಿಯಲ್ಲಿತ್ತು. ಆದ್ರೆ ಮುಖ್ಯ ನ್ಯಾಯ ಮೂರ್ತಿ ಎನ್‌ ವಿ ರಮಣ, 2019ರ ಪ್ರಕರಣವೊಂದನ್ನ ಆಧಾರವಾಗಿಟ್ಟುಕೊಂಡು ಆಧಾರವಾಗಿಟ್ಟುಕೊಂಡು, ಯಾವುದೇ ಆಫೀಸರ್ ಬಾಕಿ ಸೇವಾ ಅವಧಿ 6 ತಿಂಗಳಿಗಿಂತ ಕಡಿಮೆ ಇದ್ರೆ, ಅವರನ್ನ ತೆಗೆದುಕೊಳ್ಳಕೆ ಬರಲ್ಲ ಅಂತ ಹೇಳಿದ್ರು. ಹಾಗಾಗಿ ರಾಕೇಶ್‌ ಅಸ್ತಾನಾ, ವೈಸಿ ಮೋದಿ ಹೆಸರು ಕೈ ಬಿಡಲಾಗಿದೆ. ಸದ್ಯ ಆಂಧ್ರ ಕೇಡರ್ನ ವಿಎಸ್ಕೆ ಕೌಮುದಿ, ಬಿಹಾರ್ ಕೇಡರ್ನ ಕುಮಾರ್ ರಾಜೇಶ್ ಚಂದ್ರ, ಹಾಗೂ ಮಹರಾಷ್ಟ್ರ ಬ್ಯಾಚ್ ನ ಸುಬೋದ್ ಕುಮಾರ್ ಜೈಸ್ವಾಲ್ ಹೆಸರು ಶಾರ್ಟ್ ಲಿಸ್ಟ್ ಆಗಿದೆ ಅಂತ ಮಾಹಿತಿ ಬಂದಿದೆ. ಪ್ರಧಾನಿ ಮೋದಿ, ಸುಪ್ರೀ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ಹಾಗೂ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಒಳಗೊಂಡ ಸಮಿತಿ ಈ ನೇಮಕ ಮಾಡಲಿದೆ. ಇದರಲ್ಲಿ ಇಬ್ಬರು ಯಾರ ಹೆಸರಿಗೆ ಒಪ್ಪುತ್ತಾರೋ ಅವರು ನೇಮಕ ಆಗುತ್ತಾರೆ. ಆದ್ರೆ ಕಾಂಗ್ರೆಸ್ ನ ಅಧೀರ್ ರಂಜನ್ ಚೌಧರಿ ಅಸಮಧಾನ ಹೊರಹಾಕಿದ್ದಾರೆ. ತಮಗೆ ಬೇಕಾದವರನ್ನ ಆಯ್ಕೆ ಮಾಡಿಕೊಳ್ಳೋಕೆ ಕೇಂದ್ರ ಸರ್ಕಾರ ಕೇವಲ ೧೬ ಜನರನ್ನ ಶಾರ್ಟ್ ಲಿಸ್ಟ್ ಮಾಡಿ ಆಮೇಲೆ ನಮಗೆ ಇವರಲ್ಲಿ ಒಬ್ಬರನ್ ಆಯ್ಕೆ ಮಾಡೋಣ ಬನ್ನಿ ಅಂತ ಹೇಳ್ತಿದೆ ಅಂತ ಆರೋಪ ಮಾಡಿದ್ದಾರೆ. ಈ ನೇಮಕ ಸದ್ಯಕ್ಕೆ ತಡೆ ಹಿಡಿಬೇಕು ಅಂತ ಆಗ್ರಹ ಮಾಡಿದ್ದಾರೆ. ಆದ್ರೆ ಫೆಬ್ರವರಿಯಿಂದಲೂ ಸಿಬಿಐ ಒಬ್ಬ ಪೂರ್ಣಾವಧಿ ನಿರ್ದೇಶಕರಿಲ್ಲದೆ ಕೆಲಸ ಮಾಡ್ತಿದೆ. ಹೀಗಾಗಿ ಆದಷ್ಟು ಬೇಗ ನೇಮಕ ಆಗಬೇಕು ಅನ್ನೋದು ಕೇಂದ್ರ ಸರ್ಕಾರದ ನಿಲುವು.

-masthmagaa.com

Contact Us for Advertisement

Leave a Reply