ಮಕ್ಕಳನ್ನು ಕಳ್ಳ ಸಾಗಾಟ ಮಾಡ್ತಿದ್ದ ಜಾಲ ಭೇದಿಸಿದ ಖಾಕಿಪಡೆ!

masthmagaa.com:

ಮಕ್ಕಳನ್ನ ಕಳ್ಳಸಾಗಾಟ ಮಾಡ್ತಿದ್ದ ಅಂತಾರಾಜ್ಯ ಜಾಲವೊಂದನ್ನ ಮುಂಬೈ ಪೊಲೀಸು ಭೇದಿಸಿ, ನಾಲ್ವರನ್ನ ಅರೆಸ್ಟ್ ಮಾಡಿದ್ದಾರೆ. ಇದರಲ್ಲಿ ಒಬ್ಬಳು ಮಹಿಳೆ ಕೂಡ ಇದ್ದಾಳೆ. ಅಂದ್ಹಾಗೆ ಮುಂಬೈನ ಬಾಂದ್ರಾದ ಗುಡಿಸಿಲಿನಲ್ಲಿ ವಾಸವಿದ್ದ ಮಹಿಳೆಯೊಬ್ಬಳು ತನ್ನ 10 ತಿಂಗಳ ಗಂಡು ಮಗು ಕಾಣ್ತಿಲ್ಲ ಅಂತ ದೂರು ಕೊಟ್ಟಿದ್ದಳು. ಇದೇ ವೇಳೆ ತಾನು ಮತ್ತು ತನ್ನ ಮಗುವಿಗೆ ಆಹಾರ ಕೊಡೋಕೆ ಅಂತ ಓರ್ವ ಮಹಿಳೆ ಕಳೆದ ಕೆಲ ದಿನಗಳಿಂದ ಬರ್ತಾ ಇದ್ದಳು ಅಂತಾನೂ ಮಾಹಿತಿ ನೀಡಿದ್ದಾಳೆ. ಇದನ್ನ ಆಧರಿಸಿ ತನಿಖೆಗೆ ಇಳಿದ ಮುಂಬೈ ಪೊಲೀಸರು ಮಗುವನ್ನ ಕದ್ದಿದ್ದ ಮಹಿಳೆಯನ್ನ ಹಿಡಿದು ವಿಚಾರಿಸಿದ್ದಾರೆ. ಈ ವೇಳೆ ಆಕೆ ಆ ಮಗುವನ್ನ ಮುಂಬೈನ ಬೇರೆ ವ್ಯಕ್ತಿಗೆ ಒಂದೂವರೆ ಲಕ್ಷಕ್ಕೆ ಸೇಲ್ ಮಾಡಿದ್ದಾರೆ ಗೊತ್ತಾಗಿದೆ. ಆತ ತೆಲಂಗಾಣದ ಇಬ್ಬರಿಗೆ ಮೂರೂವರೆ ಲಕ್ಷಕ್ಕೆ ಈ ಮಗುವನ್ನ ಕೊಟ್ಟಿದ್ದಾಗಿ ಬಾಯಿ ಬಿಟ್ಟಿದ್ದಾನೆ. ಅವರನ್ನ ಕೂಡ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಮೂಲಕ ಒಟ್ಟು ನಾಲ್ವರು ಅರೆಸ್ಟ್ ಆದಂತಾಗಿದೆ. ಇದು ದೊಡ್ಡ ಜಾಲದಂತೆ ಕಾಣ್ತಿದ್ದು, ಇವರು ಇನ್ಯಾವುದಾದ್ರೂ ಮಕ್ಕಳನ್ನ ಅಪಹರಣ ಮಾಡಿದ್ದಾರಾ ಅನ್ನೋ ಬಗ್ಗೆ ತನಿಖೆ ನಡೀತಿದೆ ಅಂತ ಪೊಲೀಸರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply