ಗಂಡಸರು ಲೇಡೀಸ್ ರೀತಿ ವರ್ತಿಸಿದ್ರೆ ಹುಷಾರ್ ಎಂದ ಚೀನಾ ಸರ್ಕಾರ!

masthmagaa.com:

ಚೀನಾ ಕಮ್ಯೂನಿಸ್ಟ್ ಸರ್ವಾಧಿಕಾರದ ಸರ್ಕಾರ ಈಗ ಒಂದು ಹೊಸ ಆದೇಶ ಜಾರಿ ಮಾಡಿದೆ. ದೇಶದ ಎಲ್ಲ ರೀತಿಯ ಮಾಧ್ಯಮ ಸಂಸ್ಥೆಗಳು ಕಮ್ಯೂನಿಸ್ಟ್ ವಿರೋಧಿ ಕಲಾವಿದರನ್ನ ಬ್ಯಾನ್ ಮಾಡುವಂತೆ ಆದೇಶ ಹೊರಡಿಸಲಾಗಿದೆ. ನೇರಾನೇರ ಕಮ್ಯೂನಿಸ್ಟ್ ವಿರೋಧಿಗಳೇ ಆಗಿರಬೇಕು ಅಂತಿಲ್ಲ. ಕೆವಲ ರಾಜಕೀಯವಾಗಿ ಕೊಂಚ ಭಿನ್ನ ಅಭಿಪ್ರಾಯ ಇದ್ದರೂ ಅವರನ್ನ ಬ್ಯಾನ್ ಮಾಡುವಂತೆ ಆದೇಶಿಸಲಾಗಿದೆ. ಜೊತೆಗೆ ಗಂಡಸರು ಹೆಂಗಸರ ರೀತಿ ಕಾಣೋ ವೇಶ-ಭೂಷಣ ಹಾವಭಾವದಲ್ಲಿ, ಅಂದ್ರೆ effeminate ಆಗಿ ಕಾಣೋ ಹಾಗಿಲ್ಲ., ಅದೆಲ್ಲ ಸರಿಯಾದ ಬಿಹೇವಿಯರ್ ಅಲ್ಲ. ಅಂತದ್ದನ್ನೆಲ್ಲ ಪ್ರಸಾರ ಮಾಡೋಹಾಗಿಲ್ಲ ಅಂತಲೂ ಈ ಆದೇಶದಲ್ಲಿ ತಿಳಿಸಲಾಗಿದೆ.

-masthmagaa.com

Contact Us for Advertisement

Leave a Reply