ಬಾಹ್ಯಾಕಾಶದಲ್ಲಿ ಭಾರತ, ಅಮೆರಿಕವನ್ನ ಮೀರಿಸಿದ ಚೀನಾ?

masthmagaa.com:

ಜಾಗತಿಕವಾಗಿ ಬಾಹ್ಯಾಕಾಶ, ರಕ್ಷಣೆ ಹಾಗೂ ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಕೊಳ್ಳೋದನ್ನ ಚೀನಾ ಮುಂದುವರೆಸಿದೆ. ಇದೀಗ ಚೀನಾದ ಖಾಸಗಿ ಕಂಪನಿಯೊಂದು ಪ್ರಪಂಚದ ಮೊದಲ ಮೀಥೇನ್‌ ಲಿಕ್ವಿಡ್‌ ಆಕ್ಸಿಜನ್‌ ರಾಕೆಟ್‌ ಒಂದನ್ನ ಲಾಂಚ್‌ ಮಾಡಿದೆ. ಈ ಉಡಾವಣೆಯಿಂದ ಬಾಹ್ಯಾಕಾಶ ಕ್ಷೇತ್ರದಲ್ಲಿ ನೆಕ್ಸ್ಟ್‌ ಜನರೇಷನ್‌ ಲಾಂಚ್‌ ವೆಹಿಕಲ್‌ಗಳನ್ನ ಅಭಿವೃದ್ಧಿಪಡಿಸೋಕೆ ಪ್ರಯತ್ನಿಸುತ್ತಿರೋ ಭಾರತ, ಅಮೆರಿಕ ಹಾಗೂ ಯುರೋಪ್‌ ರಾಷ್ಟ್ರಗಳಿಗೆ ಚೀನಾ ಪ್ರತಿಸ್ಪರ್ಧೆ ನೀಡೋಕೆ ಸಜ್ಜಾಗ್ತಿದೆ ಅಂತ ವಿಶ್ಲೇಷಣೆ ಮಾಡಲಾಗ್ತಿದೆ. ಅಂದ್ಹಾಗೆ ಚೀನಾದ ಖಾಸಗಿ ಬಾಹ್ಯಾಕಾಶ ಸಂಸ್ಥೆ LandSpace ಇದಕ್ಕೂ ಮೊದಲು ಕಳೆದ ವರ್ಷ ಈ Zhuque-2 ರಾಕೆಟ್‌ ಅನ್ನ ಲಾಂಚ್‌ ಮಾಡಲು ಪ್ರಯತ್ನಿಸಿತ್ತು. ಆದ್ರೆ ಮೊದಲ ಬಾರಿಗೆ ವಿಫಲ ಕಂಡಿದ್ದ ಕಂಪನಿ ಇದೀಗ ಸಕ್ಸಸ್‌ಫುಲ್‌ ಆಗಿ ಲಾಂಚ್‌ ಮಾಡಿದೆ. ಇನ್ನು ಈ ರಾಕೆಟ್‌ ಮೀಥೇನ್‌ ಅನ್ನ ಇಂಧನವಾಗಿ ಹಾಗೂ ದ್ರವ ಆಕ್ಸಿಜನ್‌ನ್ನ ಆಕ್ಸಿಡೈಸರ್‌ ಆಗಿ ಬಳಸುತ್ತೆ.

-masthmagaa.com

Contact Us for Advertisement

Leave a Reply