LAC ಬಳಿ ಚೀನಾ ಮತ್ತೊಂದು ಸೇತುವೆ ನಿರ್ಮಾಣ, ಸ್ಯಾಟ್‌ಲೈಟ್‌ ಚಿತ್ರಗಳಲ್ಲಿ ಬಯಲು!

masthmagaa.com:

ಮೊನ್ನೆ ತಾನೆ ಗೋಧಿ ವಿಚಾರದಲ್ಲಿ ಭಾರತಕ್ಕೆ ಬೆಂಬಲ ನೀಡಿದ್ದ ಡ್ರ್ಯಾಗನ್‌ ರಾಷ್ಟ್ರ ಚೀನಾ ಈಗ ಪ್ಯಾಂಗಾಂಗ್‌ ಸೇತುವೆ ಬಳಿ ಮತ್ತೊಂದು ದೊಡ್ಡ ಸೇತುವೆ ನಿರ್ಮಾಣ ಮಾಡ್ತಾ ಇದೆ ಅಂತ ವರದಿಯಾಗಿದೆ. ಡೇಮಿಯನ್‌ ಸೈಮನ್‌ ಅನ್ನೋವ್ರು ಪೋಸ್ಟ್‌ ಮಾಡಿದ ಸ್ಯಾಟ್‌ಲೈಟ್‌ ಚಿತ್ರಗಳಲ್ಲಿ ಇದು ಬಹಿರಂಗವಾಗಿದೆ. Line of Actual Control (LAC) ಅಥ್ವಾ ವಾಸ್ತವ ಗಡಿ ನಿಯಂತ್ರಣ ರೇಖೆಯಿಂದ ಸುಮಾರು 20 ಕಿ.ಮೀ ದೂರದಲ್ಲಿ ಚೀನಾ ತನ್ನ ಪ್ರದೇಶದಲ್ಲಿ ಈ ಸೇತುವೆ ನಿರ್ಮಾಣ ಆಗ್ತಾ ಇದೆ ಅಂತ ಮಾಹಿತಿ ಬಂದಿದೆ. ಜೊತೆಗೆ ಈಗಾಗ್ಲೇ ಇಲ್ಲಿ ಚೀನಾ ಇತ್ತೀಚೆಗೆ ಒಂದು ಸೇತುವೆ ನಿರ್ಮಾಣ ಮಾಡಿತ್ತು. ಆದ್ರೆ ಅದು ಚಿಕ್ಕದ್ದಾಗಿದ್ರಿಂದ ತನ್ನ ಸೇನೆಯನ್ನ ಸರಾಗವಾಗಿ ಮೊಬಲೈಸ್‌ ಅಥ್ವಾ ಒಟ್ಟು ಮಾಡಕ್ಕೆ ಸುಲಭವಾಗ್ಲಿ ಅಂತ ದೊಡ್ಡ ಸೇತುವೆ ನಿರ್ಮಾಣ ಮಾಡ್ತಿದೆ. ಇನ್ನು ನಿರ್ಮಾಣ ಕಾರ್ಯ ಬೇಗ ಆಗ್ಲಿ ಅಂತ ಎರಡು ಕಡೆಯಿಂದ ಸೇತುವೆ ಕಟ್ತಾ ಇದೆ ಅಂತ ಗೊತ್ತಾಗಿದೆ. ಆದ್ರೆ ಈ ಬಗ್ಗೆ ಭಾರತ ಇನ್ನೂ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಅಂದ್ಹಾಗೆ ಭಾರತ ಕೂಡ ತನ್ನ ಭಾಗದಲ್ಲಿ ಸೇತುವೆಗಳು, ರಸ್ತೆಗಳು ಮತ್ತು ಟನಲ್‌ಗಳನ್ನ ನಿರ್ಮಿಸಿಕೊಂಡು ಯುದ್ಧ ಸನ್ನದ್ದತೆಯಲ್ಲಿ ಇದೆ. ಆದ್ರೆ ಕಳೆದ ಎರಡು ವರ್ಷಗಳಲ್ಲಿ ಉಭಯ ದೇಶಗಳ ನಡುವೆ ಪ್ರಕ್ಷುಬ್ದ ವಾತಾವರಣ ಉಂಟಾಗಿರುವ ಬೆನ್ನಲ್ಲೇ ಈ ಬೆಳವಣಿಗೆ ಆಗ್ತಾ ಇರೋದು ಕಳವಳಕಾರಿಯಾಗಿದೆ.

-masthmagaa.com

Contact Us for Advertisement

Leave a Reply