ಅಯ್ಯೋ! ಇನ್ಮುಂದೆ ಮಕ್ಕಳು ತಪ್ಪು ಮಾಡಿದ್ರೆ ಪೋಷಕರಿಗೆ ಘೋರ ಶಿಕ್ಷೆ!

masthmagaa.com:

ಮಕ್ಕಳ ದುರ್ವರ್ತನೆಗೆ ಪೋಷಕರಿಗೆ ಶಿಕ್ಷೆ ನೀಡೋಕೆ ಕಾನೂನು ತರಲು ಚೀನಾ ಮುಂದಾಗಿದೆ. ಚಿಕ್ಕ ವಯಸ್ಸಿನ ಮಕ್ಕಳು ದುಷ್ಟವರ್ತನೆ ತೋರಿದ್ರೆ ಅಥವಾ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ರೆ ಅಂತ ಕಿಡಿಗೇಡಿ ಮಕ್ಕಳನ್ನ ರಿಪೇರಿ ಮಾಡೋದರ ಜೊತೆಗೆ ಅಂತಾ ಮಕ್ಕಳ ಉತ್ಪತ್ತಿಗೆ ಕಾರಣ ಆದ ಪೋಷಕರನ್ನ ಕೂಡ ರಿಪೇರಿ ಮಾಡಬೇಕು ಅನ್ನೋದು ಚೀನಾ ಸರ್ಕಾರದ ಪ್ಲಾನ್. ಮಕ್ಕಳು ಚಿಕ್ಕವಯಸ್ಸಲ್ಲೇ ಹಾಳಾಗ್ತಾರೆ ಅಂದ್ರೆ ಅದಕ್ಕೆ ತಂದೆ ತಾಯಿ ಸರಿಯಾದ ಫ್ಯಾಮಿಲಿ ಎಡುಕೇಶನ್ ನೀಡಿರಲ್ಲ ಅಂತ ಅರ್ಥ ಅಂತ ಚೀನಾದ ನ್ಯಾಶನಲ್ ಪೀಪಲ್ಸ್ ಕಾಂಗ್ರೆಸ್ ವಕ್ತಾರ ಶಾಂಗ್ ಟಿವೇಯ್ ಹೇಳಿದ್ದಾರೆ. ಈಗಾಗಲೇ ಈ ಹೊಸ ಕಾನೂನಿನ ಕರಡು ರೆಡಿಯಾಗಿದೆ. ನ್ಯಾಶನಲ್ ಪೀಪಲ್ಸ್ ಕಾಂಗ್ರೆಸ್‌ನ ಸ್ಟಾಂಡಿಂಗ್ ಕಮಿಟಿ ಇದನ್ನ ಪರಿಶೀಲಿಸಲಿದೆ ಅಂತ ಹೇಳಿದ್ದಾರೆ. ತಂದೆ ತಾಯಿ ಮಕ್ಕಳಿಗೆ ಟೈಮ್ ಕೊಡಬೇಕು. ಅವರನ್ನ ತಿದ್ದಬೇಕು. ಮಕ್ಕಳು ಇಂಟರ್ನೆಟ್ ಗೇಮ್ ಗಳ ದಾಸರಾಗ್ತಿದ್ದಾರೆ. ಈ ಹಿಂದೆ ನಿಜವಾದ ಅಫೀಮು ನೀಡಿ ಚೀನೀಯರನ್ನ ದಾಸ್ಯಕ್ಕೆ ತಳ್ಳಲಾಗಿತ್ತು. ಅದಕ್ಕಾಗಿ ನಾವು ಅಫೀಮು ಯುದ್ಧಗಳನ್ನೇ ಮಾಡಬೇಕಾಗಿ ಬಂದಿತ್ತು. ಆದ್ರೆ ಈಗ ಈ ಇಂಟರ್ನೆಟ್ ಗೇಮ್ಗಳು ಹೊಸ ರೀತಿಯ ಅಫೀಮುಗಳಾಗಿ ಹೋಗಿವೆ. ನಮ್ಮ ಯುವ ಜನತೆ ಇದೆಕ್ಕೆ ಗುಲಾಮರಾಗ್ತಿದ್ದಾರೆ ಅನ್ನೋದು ಚೀನಾದ ಕಮ್ಯೂನಿಸ್ಟ್ ಸರ್ಕಾರದ ಚಿಂತೆ. ಇದೇ ಕಾರಣಕ್ಕೆ ಇತ್ತೀಚಗೆ ಚೀನಾ ಸರ್ಕಾರ ಅಪ್ರಾಪ್ತರು ಆನ್ಲೈನ್ ಗೇಮ್ ಎಷ್ಟು ಆಡಬೋದು ಅನ್ನೋದಕ್ಕೂ ರೂಲ್ಸ್ ಮಾಡಿತ್ತು. ಶುಕ್ರವಾರ, ಶನಿವಾರ ಹಾಗೂ ಭಾನುವಾರ ಈ ಮೂರು ದಿನ, ದಿನಕ್ಕೆ ಒಂದು ಗಂಟೆ ಮಾತ್ರ ಆನ್ಲೈನ್ ಗೇಮ್ ಆಡಬೋದು ಅಂತ ರೂಲ್ಸ್ ಪಾಸ್ ಮಾಡಿತ್ತು. ಜೊತೆಗೆ ಹೋಮ್ ವರ್ಕ್ ಕಮ್ಮಿ ಮಾಡಿ, ವೀಕೆಂಡ್ ಗಳಲ್ಲೂ ಟ್ಯೂಶನ್ ಕೊಡೋದನ್ನ ಬ್ಯಾನ್ ಮಾಡಿತ್ತು. ಮಕ್ಕಳು ಆರಾಮಗಿ ಓಡಾಡಿಕೊಂಡು, ಹೊರಾಂಗಣ ಆಟಗಳನ್ನ ಆಡಿಕೊಂಡಿರಬೇಕು ಅನ್ನೋದು ಇದರ ಉದ್ದೇಶ ಅಂಥ ಚೀನಾ ಸರ್ಕಾರ ಹೇಳಿತ್ತು. ಜೊತೆಗೆ ಚೀನಾ ಸರ್ಕಾರಕ್ಕೆ ತನ್ನ ಪ್ರಜೆಗಳ ಪರ್ಸನಲ್ ಲೈಫ್ ಬಗ್ಗೆ ಯಾವ ಮಟ್ಟಿಗೆ ಚಿಂತೆ ಇದೆ ಅಂದ್ರೆ, ಚೀನಾ ಹುಡುಗರು, ಗಂಡಸರು ಇನ್ನಷ್ಟು ಪುರುಶತ್ವ ತೋರಿಸಬೇಕು. ಗಂಡಸರಂತೆ ವರ್ತಿಸಬೇಕು ಅಂತ ಕೆಲವೊಂದಷ್ಟು ರೂಲ್ಸ್ ಪ್ರಪೋಸ್ ಮಾಡಿತ್ತು. ಗಂಡುಮಕ್ಕಳು ಫುಟ್ಬಾಲ್ ನಂತಹ ಶ್ರಮದ ಆಟಗಳನ್ನ ಆಡಬೇಕು. ಗಂಡಸರು ಸಿನೆಮಾ ನಾಟಕಗಳಲ್ಲೂ ಹೆಣ್ಮಕ್ಕಳಂತೆ ವೇಶಭೂಷಣ ಧರಿಸಿ ಕಾಣಿಸಿಕೊಳ್ಳಂಗಿಲ್ಲ. ಚೆನ್ನಾಗಿ ಫಿಟ್‌ನೆಸ್ ಮೇಂಟೇನ್ ಮಾಡಿ ಗಂಡಸರಂತೆ ಕಾಣಬೇಕು ಅಂತೆಲ್ಲ ಹೇಳಿತ್ತು.

-masthmagaa.com

Contact Us for Advertisement

Leave a Reply