ಕೊರೋನಾ ತವರು ಚೀನಾದಲ್ಲಿ ‘ಹೊಸ ರೂಪಾಂತರಿ’ ಪತ್ತೆ !

masthmagaa.com:

ಪಕ್ಕದ ಚೀನಾದಲ್ಲಿ ಕೊರೊನಾದ ಅಸಲಿ ಆಟ ಈಗ ಶುರುವಾಗಿದೆ.. ಒಂದೆರಡು ಕೇಸ್​ ಬಂದ್ರೂ ಲಾಕೌ ಡೌನ್‌ ಮಾಡ್ಕೊಳ್ತಿದ್ದ ಚೀನಾದಲ್ಲಿ ಕೊರೊನಾ ಕಂಟ್ರೋಲ್‌ ಗೆ ಸಿಗ್ದೇ ಓಡ್ತಾಯಿದೆ. ಭಾನುವಾರ ಒಂದೇ ದಿನ 13,000ಕ್ಕೂ ಹೆಚ್ಚು ಕೇಸ್​​ ವರದಿಯಾಗಿದೆ ಅಂತ ಚೀನಾದ ಸ್ಟೇಟ್ ಮೀಡಿಯಾ ವರದಿ ಮಾಡಿದೆ. ಇದು ಈವರೆಗಿನ ಹೈಯೆಸ್ಟ್ ನಂಬರ್ಸ್​. ಇದರಲ್ಲಿ ಒಂದೂವರೆ ಸಾವಿರದಷ್ಟಿರೋ ಸಿಂಪ್ಟೋಮ್ಯಾಟಿಕ್​ ಕೇಸ್​​ಗಳನ್ನ ಮಾತ್ರ ಚೀನಾ ಲೆಕ್ಕಕ್ಕೆ ಪರಿಗಣಿಸೋದು. ಉಳಿದ ಹನ್ನೋಂದುವರೆ ಸಾವಿರ ಜನರಿಗೆ ಕೊರೋನಾ ಪಾಸಿಟಿವ್ ಬಂದ್ರೂ, ರೋಗದ ಲಕ್ಷಣ ಇಲ್ಲ. ಹೀಗಾಗಿ ಇವುಗಳನ್ನ ಪಾಸಿಟಿವ್​ ಬಂದ್ರೂ ಪಾಸಿಟಿವ್ ಅಂತ ಪರಿಗಣಿಸಲ್ಲ ಚೀನಾ. ಚೀನಾದ ಆರ್ಥಿಕ ರಾಜಧಾನಿ ಶಾಂಗೈ ಹಾಗು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೊರೊನಾ ಕಾಟ ಜೋರಾಗಿದೆ. ಶಾಂಘೈನಲ್ಲಿ ಎಂಟು ಸಾವಿರಕ್ಕೂ ಹೆಚ್ಚು ಕೇಸ್​ ದೃಢಫಟ್ಟಿದೆ. ಈ ನಡುವೆ ಚೀನಾದಲ್ಲಿ ಒಮಿಕ್ರಾನ್‌ ಗುಂಪಿಗೆ ಸೇರಿದ BA.1.1 ತಳಿಯ ಉಪಪ್ರಭೇದವೊಂದು ಪತ್ತೆಯಾಗಿದೆ ಅಂತ ಗ್ಲೋಬಲ್​ ಟೈಮ್ಸ್​ ವರದಿ ಮಾಡಿದೆ. ಈ ಪ್ರಭೇದ ಬೇರೆ ಯಾವುದೇ ತಳಿಗೂ ಮ್ಯಾಚ್‌ ಆಗ್ತಿಲ್ಲ ಅಂತನೂ ಚೀನಾದ ಸಂಶೋಧಕರು ಹೇಳಿದ್ದಾರೆ. ಕೊರೋನಾ ಹಾವಳಿ ಹೆಚ್ಚಿರೋ ಶಾಂಘೈನಿಂದ ಸ್ವಲ್ಪವೇ ದೂರದಲ್ಲಿರೋ ನಗರದಲ್ಲಿ ಈ ಹೊಸ ಪ್ರಭೇದದ ಕೇಸ್​ ದೃಢಪಟ್ಟಿದೆ.

-masthmagaa.com

Contact Us for Advertisement

Leave a Reply