ಸಮುದ್ರದಿಂದ ರಾಕೆಟ್ ಹಾರಿಸಲು ಚೀನಾ ಕಸರತ್ತು! ಸ್ಪೆಷಲ್ ಹಡಗು ನಿರ್ಮಾಣ

masthmagaa.com:

ಚೀನಾ ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನ ತಾಕತ್ತು ಹೆಚ್ಚಿಸಿಕೊಳ್ಳಲು ಒಂದಲ್ಲಾ ಒಂದು ಹೆಜ್ಜೆ ಇಡ್ತಾನೇ ಇದೆ. ಅದೇ ರೀತಿ ಈಗ ರಾಕೆಟ್ ಉಡಾವಣೆ ಮಾಡಲು ಸಾಧ್ಯವಾಗುವಂತಹ ವಿಶೇಷವಾಗಿ ಡಿಸೈನ್ ಮಾಡಲಾದ ಹಡಗನ್ನು ಸಿದ್ಧಪಡಿಸ್ತಿದೆ. ಈ ಹಡಗು 533 ಅಡಿ ಉದ್ದ, 131 ಅಡಿ ಅಗಲವಾಗಿದೆ. ಪೂರ್ವ ಚೀನಾದ ಶನ್​ಡಾಂಗ್​​ ಪ್ರಾಂತ್ಯದಲ್ಲಿ ಈ ನ್ಯೂ ಟೈಪ್ ರಾಕೆಟ್ ಲಾಂಚಿಂಗ್ ನೌಕೆಯನ್ನು ನಿರ್ಮಿಸಲಾಗ್ತಿದೆ. 2022ರ ವೇಳೆಗೆ ನಿರ್ಮಾಣ ಕಾರ್ಯ ಪೂರ್ಣಗೊಂಡು ಸೇವೆಗೆ ಲಭ್ಯವಾಗಲಿದೆ ಅಂತ ಮೂಲಗಳು ತಿಳಿಸಿವೆ. ಇದನ್ನು ಎಲಾನ್​ ಮಸ್ಕ್​​​​​​​ರ ಸ್ಪೇಸ್​​ ಎಕ್ಸ್​​​​ ರೀತಿಯಲ್ಲೇ ರಾಕೆಟ್​​ನ ಫಸ್ಟ್​ ಸ್ಟೇಜ್​​​ನ್ನು ರಿಕವರಿ ಮಾಡಲು ಬಳಸಿಕೊಳ್ಳಬಹುದಾಗಿದೆ.

-masthmagaa.com

Contact Us for Advertisement

Leave a Reply