ಟಿಬೆಟ್​​​ಗೆ ಚೀನಾ ಬುಲೆಟ್ ಟ್ರೈನ್.. ಭಾರತಕ್ಕೆ ಟೆನ್ಶನ್ ಯಾಕೆ..?

masthmagaa.com:

ಚೀನಾದಲ್ಲಿಂದು ಇದೇ ಮೊದಲ ಬಾರಿಗೆ ಟಿಬೆಟ್​​​​​​​​​​ನ ಹಿಮಾಲಯನ್ ಪ್ರದೇಶದಲ್ಲಿ ಕಂಪ್ಲೀಟ್ ವಿದ್ಯುದೀಕರಿಸಿದ ಬುಲೆಟ್ ಟ್ರೈನ್ ಚಾಲನೆಗೆ ತಂದಿದೆ. ಪ್ರಾಂತ್ಯದ ರಾಜಧಾನಿ ಲಾಸಾ ಮತ್ತು ಅರುಣಾಚಲ ಪ್ರದೇಶಕ್ಕೆ ಹತ್ತಿರದಲ್ಲಿರೋ ನೈಂಗ್ಚಿಯನ್ನು ಇದು ಸಂಪರ್ಕಿಸುತ್ತೆ. ಜುಲೈ 1ರಂದು ಚೀನಾದ ಕಮ್ಯೂನಿಸ್ಟ್ ಸರ್ಕಾರಕ್ಕೆ ಶತಮಾನೋತ್ಸವದ ಸಂಭ್ರಮ.. ಹೀಗಾಗಿ ಸಿಚುವಾನ್-ಟಿಬೆಟ್ ರೈಲ್ವೆಯ 435.5 ಕಿಲೋಮೀಟರ್ ಉದ್ದವಿರೋ ಲಾಸಾ-ನೈಂಗ್ಚಿ ಮಾರ್ಗವನ್ನು ಉದ್ಘಾಟಿಸಲಾಗಿದೆ. ಇದು ಸಿಚುವಾನ್-ಲಾಸಾ ರೈಲ್ವೆ ಯೋಜನೆಯ ಒಂದು ಭಾಗ ಅಷ್ಟೆ. ಇದು ಸಿಚುವಾನ್​​ನ ಚೆಂಗ್ಡುವಿನಿಂದ ಟೆಬೆಟ್​​ನ ಲಾಸಾಗೆ ಸಂಪರ್ಕಿಸೋ ರೈಲು ಯೋಜನೆ. ಆದ್ರೆ ಇದು ಭಾರತದ ಗಡಿರಾಜ್ಯ ಅರುಣಾಚಲ ಪ್ರದೇಶಕ್ಕೆ ಹತ್ತಿರದವರೆಗೂ ಬರಲಿದೆ. ಇದು ಭಾರತಕ್ಕೆ ಟೆನ್ಶನ್​ ವಿಚಾರವಾಗಿದೆ. ಈಗಾಗಲೇ ಅರುಣಾಚಲ ಪ್ರದೇಶ ದಕ್ಷಿಣ ಟಿಬೆಟ್​​ನ ಭಾಗ ಅಂತಲೇ ವಾದಿಸುತ್ತಾ ಬಂದಿದ್ದು, ಭಾರತ ಅದನ್ನು ನಿರಾಕರಿಸುತ್ತಲೇ ಇದೆ. ಮತ್ತೊಂದ್ಕಡೆ ಪೂರ್ವ ಲಡಾಕ್ ವಿಚಾರದಲ್ಲೂ ಚೀನಾ ತನ್ನ ದುರ್ಬುದ್ಧಿ ಮುಂದುವರಿಸಿದೆ. ಇತ್ತೀಚೆಗೆ ಕತರ್​ ಎಕನಾಮಿಕ್ ಫೋರಂನಲ್ಲಿ ಮಾತನಾಡಿದ್ದ ವಿದೇಶಾಂಗ ಸಚಿವ ಎಸ್​ ಜೈಶಂಕರ್​​​​, ಚೀನಾ ಲೈನ್ ಆಫ್ ಆಕ್ಟುವಲ್ ಕಂಟ್ರೋಲ್​​ನಲ್ಲಿ ಸೇನೆಯನ್ನು ಹೆಚ್ಚಿಸ್ತಾ ಇದೆ ಅಂತ ಹೇಳಿದ್ರು. ಇದ್ರಿಂದ ಫುಲ್ ಉರ್ಕೊಂಡು ಪ್ರತಿಕ್ರಿಯಿಸಿರೋ ಚೀನಾ, ಭಾರತದ ಆಕ್ರಮಣಕಾರಿ ನೀತಿಯೇ ಪೂರ್ವ ಲಡಾಕ್ ವಿವಾದಕ್ಕೆ ಕಾರಣ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply