ಚೀನಾದಲ್ಲಿ ಬಾಯಿ ಬಿಟ್ರೆ ಹುಷಾರ್!

masthmagaa.com:

ಚೀನಾದ ಕಮ್ಯೂನಿಸ್ಟ್ ಪಕ್ಷಕ್ಕೆ ಇದೇ ಜುಲೈ ತಿಂಗಳಲ್ಲಿ 100 ವರ್ಷ ಭರ್ತಿಯಾಗ್ತಿದೆ. ಅದ್ರ ನಡುವೆಯೇ ಸೈಬರ್ ರೆಗ್ಯುಲೇಟರ್ ಒಂದು ಹಾಟ್​ಲೈನ್​ ಶುರು ಮಾಡಿದೆ. ಕಮ್ಯೂನಿಸ್ಟ್ ಪಕ್ಷದ ಬಗ್ಗೆ, ಪಕ್ಷದ ಇತಿಹಾಸದ ಬಗ್ಗೆ ಮಾತನಾಡುವವರನ್ನು ಪತ್ತೆಹಚ್ಚೋದು, ಮಟ್ಟಹಾಕೋದು ಈ ಹಾಟ್​ಲೈನ್ ಉದ್ದೇಶ.. ಹೀಗಾಗಿ ಯಾರಾದ್ರೂ ಕಮ್ಯೂನಿಸ್ಟ್ ಪಕ್ಷದ ನಾಯಕತ್ವ, ನೀತಿಗಳ ವಿರುದ್ಧ ಮಾತಾಡಿದ್ರೆ, ರಾಷ್ಟ್ರೀಯ ನಾಯಕರನ್ನು ಪ್ರಶ್ನಿಸಿದ್ರೆ, ಸೋಷಿಯಲ್ ಮೀಡಿಯಾದಲ್ಲಿ ಸಮಾಜವಾದಿ ಸಂಸ್ಕೃತಿಗೆ ಅಪಮಾನ ಮಾಡಿದ್ರೆ ಹಾಟ್​​ಲೈನ್ ಮೂಲಕ ಮಾಹಿತಿ ನೀಡಿ ಅಂತ ಜನರಿಗೆ ತಿಳಿಸಿದೆ. ಹಾಟ್​ಲೈನ್ ಮೂಲ ದೂರು ಬಂದ್ರೆ ಯಾವ ರೀತಿಯ ಕ್ರಮ ಕೈಗೊಳ್ಳಲಾಗುತ್ತೆ. ಎಂಥಾ ಶಿಕ್ಷೆ ನೀಡಲಾಗುತ್ತೆ ಅನ್ನೋ ಬಗ್ಗೆ ಇನ್ನೂ ಕೂಡ ಸರ್ಕಾರ ತಿಳಿಸಿಲ್ಲ. ಚೀನಾದಲ್ಲಿ ಸರ್ಕಾರದ ನಾಯಕತ್ವದ ವಿರುದ್ಧ ಕಾಮೆಂಟ್ ಮಾಡಿರೋರು ಈಗಾಗಲೇ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಚೀನಾದಲ್ಲಿ ವಿದೇಶಿ ಸೋಷಿಯಲ್ ಮೀಡಿಯಾ, ಸರ್ಚ್ ಇಂಜಿನ್​ ಮೆಲೆ ಈಗಾಗಲೇ ದೊಡ್ಡ ಮಟ್ಟದಲ್ಲಿ ನಿರ್ಬಂಧ ವಿಧಿಸಲಾಗಿದೆ.

-masthmagaa.com

Contact Us for Advertisement

Leave a Reply