ಸಂಘರ್ಷದದಲ್ಲಿ ನಾವು ಸರಿಯಾದ ಕಡೆ ನಿಂತಿದ್ದೀವಿ: ಚೀನಾ

masthmagaa.com:

ಯುಕ್ರೇನ್ ಸಂಘರ್ಷಕ್ಕೆ ಸಂಬಂಧಿಸಿದ ಇತಿಹಾಸದಲ್ಲಿ ಚೀನಾ ಸರಿಯಾದ ಕಡೆ ನಿಂತಿದೆ ಅಂತ ಚೀನಾ ವಿದೇಶಾಂಗ ಸಚಿವ ವಾಂಗ್ ಇ ಹೇಳಿದ್ದಾರೆ. ಚೀನಾ ಯಾವತ್ತಿಗೂ ಬಾಹ್ಯ ಒತ್ತಡ ಮತ್ತು ಬಲವಂತಕ್ಕೆ ಮಣಿಯೋದಿಲ್ಲ. ನಮ್ಮ ವಿರುದ್ಧದ ಆಧಾರವಿಲ್ಲದ ಮತ್ತು ಸಂಚಿನಿಂದ ಕೂಡಿದ ಆರೋಪಗಳನ್ನು ಕೂಡ ವಿರೋಧಿಸುತ್ತೆ ಅಂತ ಹೇಳಿದ್ದಾರೆ. ಚೀನಾ ಯಾವತ್ತಿಗೂ ವಿಶ್ವಶಾಂತಿಯನ್ನೇ ಬಯಸುತ್ತೆ. ಯುದ್ಧವನ್ನು ವಿರೋಧಿಸುತ್ತೆ ಅಂತಲೂ ಹೇಳಿದ್ದಾರೆ. ನಿನ್ನೆಯಷ್ಟೇ ಜೋ ಬೈಡೆನ್ ಮತ್ತು ಚೀನಾ ಅಧ್ಯಕ್ಷ ಶಿ ಜಿನ್​ಪಿಂಗ್ ಮೀಟಿಂಗ್ ಮಾಡಿದ್ರು. ಈ ವೇಳೆ ಚೀನಾ ರಷ್ಯಾಗೆ ಯುದ್ಧಕ್ಕೆ ಸಂಬಂಧಿಸಿದಂತೆ ಏನಾದ್ರೂ ಸಹಾಯ ಮಾಡಿದ್ರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತೆ ಅಂತಲೂ ಎಚ್ಚರಿಸಿದ್ರು. ಅದ್ರ ಬೆನ್ನಲ್ಲೇ ವಾಂಗ್ ಇ ಹೀಗೆ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply