ಜಲಗಡಿಯಲ್ಲಿ ಕಾದಾಟ: ಚೀನಾ-ಫಿಲಿಪೈನ್ಸ್‌ ಮಧ್ಯೆ ಟಾಕ್‌ವಾರ್!

masthmagaa.com:

ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಹಾಗೂ ಫಿಲಿಪೈನ್ಸ್‌ ನಡುವಿನ ಕಾಳಗ ಮತ್ತೊಂದು ಹಂತ ತಲುಪಿದೆ. ಇತ್ತೀಚಿಗೆ ಚೀನಾದ ಕೋಸ್ಟ್‌ ಗಾರ್ಡ್‌ ಹಡಗುಗಳು ಫಿಲಿಪೈನ್ಸ್‌ನ ಸಪ್ಲೈ ಬೋಟಿನ ಮೇಲೆ ವಾಟರ್‌ ಕ್ಯಾನನ್‌ ಅಥವಾ ಜಲ ಫಿರಂಗಿ ಮೂಲಕ ದಾಳಿ ನಡೆಸಿದ್ವು. ಈ ವಿಚಾರವಾಗಿ ಫಿಲಿಪೈನ್ಸ್ ಈಗ ಗರಂ ಆಗಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಅಧಿಕಾರ ಚಲಾಯಿಸೋದನ್ನ ನಿಲ್ಲಿಸಿ ಅಂತೇಳಿದೆ. ʻಚೀನಾ ತನ್ನ ಹಕ್ಕುಗಳನ್ನ ವಿಶ್ವದ ಮುಂದೆ ಹೇಳಲು ಹೆದರೊದಿಲ್ಲ. ಹೀಗಾಗಿ ಅಂತರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ನಾವೇಕೆ ಮಧ್ಯಸ್ಥಿಕೆ ವಹಿಸ್ಬಾರ್ದುʼ ಅಂತ ಫಿಲಿಪೈನ್ಸ್‌ ರಕ್ಷಣಾ ಕಾರ್ಯದರ್ಶಿ ಗಿಲ್ಬರ್ಟೊ ಟಿಯೊಡೊರೊ ಹೇಳಿದ್ದಾರೆ. ಅಲ್ದೇ ನಮ್ಮ ನಿಲುವಿಗೆ ನಾವು ಬದ್ದವಾಗಿದ್ದೇವೆ ಅಂತೇಳಿ ಚೀನಾಗೆ ಟಾಂಗ್‌ ಕೊಟ್ಟಿದ್ದಾರೆ. ಆದ್ರೆ ಈ ವಿಚಾರವಾಗಿ ರಿಯಾಕ್ಟ್‌ ಮಾಡಿರೊ ಚೀನಾದ ರಕ್ಷಣಾ ಸಚಿವಾಲಯ, ʻಈ ಸಂಘರ್ಷದ ತೀವ್ರತೆ ಹೆಚ್ಚಿಸಲು ನೀವು ಮಾಡ್ತಿರೊ ಟೀಕೆಗಳನ್ನ ನಿಲ್ಸಿ ಹಾಗೂ ಉದ್ವಿಗ್ನತೆ ಹೆಚ್ಚಾಗಲು ಕಾರಣವಾಗ್ಬೇಡಿʼ ಅಂತ ಫಿಲಿಪೈನ್ಸ್‌ಗೆ ಚೀನಾ ವಾರ್ನಿಂಗ್‌ ಮಾಡಿದೆ. ಜೊತೆಗೆ ʻಫಿಲಿಪೈನ್ಸ್‌, ನಮ್ಮ ಜಲಗಡಿಯಲ್ಲಿ ಬಾಲ ಬಿಚ್ಚಿದ್ರೆ ಚೀನಾ ತನ್ನ ಸಾರ್ವಭೌಮತ್ವಕ್ಕೆ ಬೇಕಾದ ಅಗತ್ಯ ರಕ್ಷಣಾ ಕ್ರಮಗಳನ್ನ ಕೈಗೊಳೋದನ್ನ ಮುಂದುವರೆಸ್ತೇವೆʼ ಅಂತೇಳಿದೆ. ಅಂದ್ರೆ ವಿವಾದಿತ ದಕ್ಷಿಣ ಚೀನಾ ಸಮುದ್ರ ಭಾಗದಲ್ಲಿರೋ ಎರಡನೇ ಥಾಮಸ್‌ ಶೋಲ್‌ನಲ್ಲಿ ಫಿಲಿಪೈನ್ಸ್‌ ಹಡುಗಗಳ ಮೇಲಿನ ದಾಳಿ ನಿಲ್ಸಲ್ಲ ಅಂತ ಚೀನಾ ಪರೋಕ್ಷವಾಗಿ ಎಚ್ಚರಿಕೆ ನೀಡಿದೆ.

-masthmagaa.com

Contact Us for Advertisement

Leave a Reply