BIG NEWS: ಕೊರೋನಾದಿಂದ ಚೀನಾದಲ್ಲಿ ವ್ಯಕ್ತಿ ಸಾವು, 8 ತಿಂಗಳ ಬಳಿಕ ಫಸ್ಟ್​!

masthmagaa.com:

ಕೊರೋನಾ ವೈರಸ್​ನ ತವರು ಚೀನಾದಲ್ಲಿ ಕೊರೋನಾ ಕಾಟ ಮತ್ತೆ ಜೋರಾಗಿದೆ. ಎಷ್ಟರಮಟ್ಟಿಗೆ ಅಂದ್ರೆ ಬರೋಬ್ಬರಿ 8 ತಿಂಗಳ ಬಳಿಕ ಕೊರೋನಾಗೆ ವ್ಯಕ್ತಿಯೊಬ್ರು ಪ್ರಾಣ ಕಳೆದುಕೊಂಡಿದ್ದಾರೆ. ಈ ಮೂಲಕ ಚೀನಾದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 4,635ಕ್ಕೆ ಏರಿಕೆಯಾಗಿದೆ. ಅಂದ್ಹಾಗೆ ಕೊರೋನಾವನ್ನ ಬಹುತೇಕ ಕಂಟ್ರೋಲ್ ಮಾಡಿರೋ ಚೀನಾದಲ್ಲಿ 2020ರ ಮೇ ಬಳಿಕ ಕೊರೋನಾದಿಂದ ಯಾರೂ ಮೃತಪಟ್ಟಿರಲಿಲ್ಲ. ಮೃತಪಟ್ಟಿರುವ ವ್ಯಕ್ತಿ ಬಗ್ಗೆ ಚೀನಾ ಹೆಚ್ಚಿನ ಮಾಹಿತಿ ಏನೂ ನೀಡಿಲ್ಲ. ಹೀಬೆ ಪ್ರಾಂತ್ಯದಲ್ಲಿ ಈ ಸಾವು ಸಂಭವಿಸಿದೆ ಅಂತ ಅಷ್ಟೇ ಹೇಳಿದೆ.

ಇನ್ನೊಂದು ವಿಚಾರ ಅಂದ್ರೆ ಚೀನಾದಲ್ಲಿ ಕಳೆದ 24 ಗಂಟೆಗಳಲ್ಲಿ 138 ಜನರಿಗೆ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದೆ. ಭಾರತಕ್ಕೆ ಹೋಲಿಸಿದ್ರೆ ಈ ನಂಬರ್ ಯಾವ ಲೆಕ್ಕಕ್ಕೂ ಇಲ್ಲ. ಆದ್ರೆ ಚೀನಾಗೆ ಇದೇ ದೊಡ್ಡ ವಿಚಾರ. ಯಾಕಂದ್ರೆ 2020ರ ಮಾರ್ಚ್​ ಬಳಿಕ ದೃಢಪಟ್ಟ ಅತಿಹೆಚ್ಚು ಕೇಸ್​ ಇದು. ಹೀಗಾಗಿ ಅಲರ್ಟ್ ಆಗಿರೋ ಚೀನಾ ಸರ್ಕಾರ ದೇಶದ ಹಲವೆಡೆ ಲಾಕ್​ಡೌನ್ ಹೇರಿದೆ. ಹೀಬೆ ಪ್ರಾಂತ್ಯದ ರಾಜಧಾನಿ ಶಿಜಿಯಾಝೌಂಗ್​ ಕೊರೋನಾ ಸೋಂಕಿನ ಎಪಿಸೆಂಟರ್​ ರೀತಿ ಆಗಿದ್ದು ಶಾಲೆ, ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಲಾಗಿದೆ. 70 ಲಕ್ಷ ಜನರಿರುವ ಪಕ್ಕದ ಷಿಂಗ್​ಟಾಯ್​ ನಗರದಲ್ಲೂ ಲಾಕ್​ಡೌನ್ ಹೇರಲಾಗಿದೆ. ಇನ್ನು ಮತ್ತೊಂದು ಪ್ರಾಂತ್ಯವಾದ ಹೆಲಾಂಗ್​ಜಿಯಾಂಗ್​ನಲ್ಲಿ ತುರ್ತುಪರಿಸ್ಥಿತಿ ಘೋಷಿಸಲಾಗಿದೆ. ಈ ಪ್ರಾಂತ್ಯದ 3.7 ಕೋಟಿ ಜನರನ್ನ ಪ್ರಾಂತ್ಯ ಬಿಟ್ಟು ಹೊರ ಹೋಗದಂತೆ ಸೂಚಿಸಲಾಗಿದೆ. ಹೆಚ್ಚೆಚ್ಚು ಕೊರೋನಾ ಪರೀಕ್ಷೆ ನಡೆಸಲಾಗ್ತಿದೆ.

-masthmagaa.com

Contact Us for Advertisement

Leave a Reply