masthmagaa.com:

ಕೊರೋನಾ ವೈರಸ್​​ನ ತವರು ಚೀನಾದಲ್ಲಿ ಕಳೆದ 24 ಗಂಟೆಗಳಲ್ಲಿ 101 ಜನರಿಗೆ ಹೊಸದಾಗಿ ಸೋಂಕು ದೃಢಪಟ್ಟಿದೆ. ಇದರಲ್ಲಿ 98 ಪ್ರಕರಣ ಸ್ಥಳೀಯವಾಗಿದ್ದು, 3 ಪ್ರಕರಣ ವಿದೇಶ ಪ್ರಯಾಣದ ಹಿನ್ನೆಲೆ ಹೊಂದಿದೆ ಅಂತ ಚೀನಾದ ನ್ಯಾಷನಲ್ ಹೆಲ್ತ್ ಕಮಿಷನ್ ತಿಳಿಸಿದೆ. ಏಪ್ರಿಲ್ ಬಳಿಕ ಚೀನಾದಲ್ಲಿ ವರದಿಯಾದ ಅತಿ ಹೆಚ್ಚು ಪ್ರಕರಣ ಇದಾಗಿದೆ.

ಸ್ಥಳೀಯ 98 ಪ್ರಕರಣಗಳಲ್ಲಿ 89 ಕೇಸ್​ಗಳು ಕೊರೋನಾ ಸೋಂಕಿನ ಹೊಸ ಹಾಟ್​ಸ್ಪಾಟ್ ಆಗಿರುವ ಷಿನ್​ಜಿಯಾಂಗ್ ಉಗರ್ ಸ್ವಾಯತ್ತ ಪ್ರದೇಶದಲ್ಲೇ ವರದಿಯಾಗಿದೆ. ಉಳಿದಂತೆ ಲಿಯೊನಾಂಗ್ ಪ್ರಾಂತ್ಯದಲ್ಲಿ 8 ಮತ್ತು ರಾಜಧಾನಿ ಬೀಜಿಂಗ್​ನಲ್ಲಿ 1 ಪ್ರಕರಣ ದೃಢಪಟ್ಟಿದೆ.

ಕಳೆದ 24 ಗಂಟೆಗಳಲ್ಲಿ ಕೊರೋನಾಗೆ ಸಂಬಂಧಿಸಿದಂತೆ ಚೀನಾದಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಹೊಸದಾಗಿ 10 ಸೋಂಕಿತರು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಚೀನಾದಲ್ಲಿ ಇದುವರೆಗೆ 84,060 ಜನರಿಗೆ ಸೋಂಕು ತಗುಲಿದ್ದು, ಈ ಪೈಕಿ 4,634 ಸೋಂಕಿತರು ಮೃತಪಟ್ಟಿದ್ದಾರೆ. 78,944 ಸೋಂಕಿತರು ಗುಣಮುಖರಾಗಿ ಹೋಗಿದ್ದಾರೆ.

ಚೀನಾದಲ್ಲಿ 4 ದಿನದಲ್ಲಿ ದೃಢಪಟ್ಟ ಕೇಸ್:

ಜುಲೈ 26: 41

ಜುಲೈ 27: 61

ಜುಲೈ 28: 68

ಜುಲೈ 29: 101

-masthmagaa.com

Contact Us for Advertisement

Leave a Reply