ಚೀನೀ ಸುಂದರಿ ಸುಳಿ! ಎಲ್ಲಾ ದೇಶಗಳಲ್ಲೂ ನಿ’ಗೂಢ’ ವಿಷಜಾಲ!

masthmagaa.com:

ಚೀನಾ ನೇರವಾಗಿ ಪಾಶ್ಚಿಮಾತ್ಯ ದೇಶಗಳನ್ನು ಎದುರುಹಾಕಿಕೊಳ್ತಿದೆ. ಅದೇ ರೀತಿ ತನ್ನ ಗೂಢಾಚಾರಿಗಳನ್ನು ಶತ್ರುದೇಶಗಳಲ್ಲಿ ಬಿಟ್ಟು ಸರ್ಕಾರದ ಮಟ್ಟದಲ್ಲಿ ಪ್ರಭಾವ ಭೀರುವ ಪ್ರಯತ್ನವನ್ನೂ ಮಾಡ್ತಿದೆ. ಬ್ರಿಟನ್ ಗುಪ್ತಚರ ಸಂಸ್ಥೆ ಈ ವಿಚಾರವನ್ನ ಬಹಿರಂಗಗೊಳಿಸಿದೆ. ಚೀನೀ ಗೂಢಾಚಾರಿಯ ವಿಚಾರವಾಗಿ ತನ್ನ ಸಂಸದರನ್ನು ಎಚ್ಚರಿಸಿದೆ. ಬ್ರಿಟನ್​​ನ ಪ್ರಮುಖ ಪಕ್ಷಗಳಲ್ಲಿ ಒಂದಾಗಿರೋ ಲೇಬರ್ ಪಕ್ಷಕ್ಕೆ ಚಂದಾ ನೀಡ್ತಿರೋ ಕ್ರಿಸ್ಟಿನಾ ಲೀ ಚೀನೀ ಗೂಢಾಚಾರಿ ಅನ್ನೋ ಅನುಮಾನ ಇದೆ. ಆಕೆ ಮಾಜಿ ಸಂಸದರೊಬ್ಬರ ಜೊತೆ ತುಂಬಾ ಹತ್ತಿರದ ಸಂಬಂಧ ಕೂಡ ಹೊಂದಿದ್ದಾಳೆ ಅಂತ ಎಚ್ಚರಿಸಿದೆ. ಜೊತೆಗೆ ಈಕೆ ಭದ್ರತಾ ಏಜೆನ್ಸಿಗಳ ಮೇಲೂ ನಿಗಾ ಇಡ್ತಿದ್ದು, ಚೀನೀ ಕಮ್ಯೂನಿಸ್ಟ್ ಪಕ್ಷಕ್ಕಾಗಿ ಗೂಢಾಚಾರಿಕೆ ಮಾಡ್ತಿರೋ ಸಾಧ್ಯತೆ ಇದೆ ಅಂತ ಎಚ್ಚರಿಸಿದೆ. ಆಕೆಯನ್ನು ಇನ್ನೂ ಅರೆಸ್ಟ್ ಮಾಡಿಲ್ಲ.. ಆಕೆ ಈಗಲೂ ರಾಜಕೀಯ ಮಟ್ಟದಲ್ಲಿ ಹಸ್ತಕ್ಷೇಪ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾಳೆ ಕೂಡ ವಾರ್ನಿಂಗ್ ಕೊಡಲಾಗಿದೆ. ಈವರೆಗೆ ಬ್ರಿಟನ್​​ನ ಯಾವುದೇ ರಾಜಕಾರಣಿ ಆಕೆಯ ಜೊತೆ ಸೇರಿರೋ ಸಾಧ್ಯತೆ ಇಲ್ಲ ಅಂತ ಸ್ಪೀಕರ್ ಸಷ್ಟಪಡಿಸಿದ್ದಾರೆ. ಸದ್ಯ ಈ ಕ್ರಿಸ್ಟಿನಾ ಲೀ ಲಂಡನ್​​ನಲ್ಲಿ ವಕೀಲೆಯಾಗಿ ಕೆಲಸ ಮಾಡ್ತಿದ್ದು, ಚೀನಾ ರಾಯಭಾರ ಕಚೇರಿಯ ಮಾಜಿ ಮುಖ್ಯ ಕಾನೂನು ಸಲಹೆಗಾರರೂ ಆಗಿದ್ದಾರೆ. ಈಕೆ ಲೇಬರ್ ಪಕ್ಷಕ್ಕೆ ದೊಡ್ಡಮೊತ್ತದ ದೇಣಿಗೆ ನೀಡಿದ್ದು, 5 ವರ್ಷಗಳ ಹಿಂದೆ ಈ ಬಗ್ಗೆ ಸುದ್ದಿಯಾಗಿತ್ತು. ಆದ್ರೆ ನಂತರದಲ್ಲಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದಕ್ಕೂ ಮುನ್ನ 2005ರಲ್ಲಿ ಚೀನೀ ಗುಪ್ತಚರ ಸಂಸ್ಥೆ ಲಿಬರಲ್ ಪಕ್ಷದ ನಾಯಕರಿಗೂ ದೇಣಿಗೆ ನೀಡಿತ್ತು. 2013ರಲ್ಲಿ ಕ್ರಿಸ್ಟಿನಾ ಲೀ ಲಿಬರಲ್ ಪಕ್ಷದ ನಾಯಕ ಮತ್ತು ಇಂಧನ ಸಚಿವರಾಗಿದ್ದ ಎಡ್​ ಡೆವಿ ಎಂಬುವವರಿಗೆ ದುಡ್ಡು ಕೊಟ್ಟಿದ್ರು. ಈ ಹಿಂದೆ ಡೇವಿಡ್ ಕ್ಯಮೆರೂನ್ ಪ್ರಧಾನಿಯಾಗಿದ್ದಾಗಲೂ ಹಲವಾರು ಭಾಗಿ ಭೇಟಿಯಾಗಿದ್ರು ಅಂತ ಗೊತ್ತಾಗಿದೆ. ಬ್ರಿಟನ್​ ಮಾತ್ರವಲ್ಲ..ಚೀನಾದ ಗೂಢಚಾರರು ಫ್ರಾನ್ಸ್, ಅಮೆರಿಕ ಮತ್ತು ನೆದರ್ಲೆಂಡ್ಸ್‌ನಲ್ಲೂ ಆ್ಯಕ್ಟೀವ್ ಆಗಿದ್ದಾರೆ. ಚೀನಾ ನಮ್ಮ ದೇಶದಲ್ಲಿ ಹನಿಟ್ರ್ಯಾಪ್‌ಗಾಗಿ ಹೆಚ್ಚಿನ ಪ್ರಮಾಣದ ಗೂಢಚಾರರನ್ನು ನಿಯೋಜಿಸುತ್ತಿದೆ ಅಂತ ಫ್ರಾನ್ಸ್ ಆರೋಪಿಸಿತ್ತು. ಇದಾದ ಬಳಿಕ ಉಭಯ ದೇಶಗಳ ಸಂಬಂಧವೂ ಹಳಸಿತ್ತು. ನಂತರ ಬ್ರಿಟನ್ ಮತ್ತು ನೆದರ್ಲ್ಯಾಂಡ್ಸ್ 2016ರಲ್ಲಿ ಚೀನಾ ವಿರುದ್ಧ ಇದೇ ರೀತಿಯ ಆರೋಪಗಳನ್ನು ಮಾಡಿದ್ದವು.

-masthmagaa.com

Contact Us for Advertisement

Leave a Reply