ಆ​ ಕಾರ್ಯಕ್ರಮಕ್ಕೆ ಬರಬೇಡಿ ಅಂತ ಕೈಮುಗಿದು ಕೇಳ್ಕೊಂಡ ಚೀನಾ!

masthmagaa.com:

ಚೀನಾದ ಷಿಂಜಿಯಾಂಗ್ ಪ್ರಾಂತ್ಯದಲ್ಲಿ ಉಘರ್ ಮುಸ್ಲಿಮರ ಮೇಲೆ ಚೀನಾ ದಬ್ಬಾಳಿಕೆ ನಡೆಸ್ತಿದೆ, ಮಾನವ ಹಕ್ಕುಗಳನ್ನ ಉಲ್ಲಂಘಿಸ್ತಿದೆ, ಅವರನ್ನ ಕ್ಯಾಂಪ್​ಗಳಲ್ಲಿ ಬಂಧಿಸಿಟ್ಟು ಕಿರುಕುಳ ಕೊಡ್ತಿದೆ ಅನ್ನೋ ಆರೋಪವನ್ನ ಅಮೆರಿಕ ಸೇರಿದಂತೆ ಜಗತ್ತಿನ ಇತರ ದೇಶಗಳು ಮಾಡ್ತಾ ಬರ್ತಿವೆ. ಆದ್ರೆ ಚೀನಾ ಮಾತ್ರ, ಹಾಗೆಲ್ಲಾ ಏನೂ ಇಲ್ಲ. ಉಘರ್ ಮುಸ್ಲಿಮರು ಉಗ್ರರಾಗದಂತೆ ತಡೆಯಲು ಕ್ಯಾಂಪ್​ಗಳಲ್ಲಿ ಟ್ರೈನಿಂಗ್ ನೀಡ್ತಿದ್ದೇವೆ ಅಂತ ಹೇಳ್ತಾ ಬರ್ತಿದೆ. ಇದೀಗ ಅಮೆರಿಕ, ಜರ್ಮನಿ, ಬ್ರಿಟನ್ ಮುಂತಾದ ದೇಶಗಳು ಷಿಂಜಿಯಾಂಗ್​ ಪ್ರಾಂತ್ಯದಲ್ಲಿ ನಡೆಯಲಿರೋ ಮಾನವ ಹಕ್ಕು ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಂದಾಗಿವೆ. ಆದ್ರೆ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಆ ಕಾರ್ಯಕ್ರಮದಲ್ಲಿ ಭಾಗವಹಿಸಬಾರ್ದು ಅಂತ ಚೀನಾ ಆಗ್ರಹಿಸಿದೆ. ತನ್ನ ಗುಟ್ಟು ರಟ್ಟಾಗುತ್ತೆ ಅನ್ನೋ ಭಯ ಚೀನಾದ್ದು ಅನ್ಸುತ್ತೆ. ಈ ಬಗ್ಗೆ ವಿಶ್ವಸಂಸ್ಥೆಯಲ್ಲಿರೋ ಚೀನಾದ ನಿಯೋಗ ಹೇಳಿಕೆಯೊಂದನ್ನ ಬಿಡಗಡೆ ಮಾಡಿದೆ. ಷಿನ್​ಜಿಯಾಂಗ್​ನಲ್ಲಿ ನಡೆಯಲಿರೋ ಕಾರ್ಯಕ್ರಮ ರಾಜಕೀಯ ಪ್ರೇರಿತವಾಗಿದೆ. ಮಾನವ ಹಕ್ಕುಗಳ ವಿಚಾರ ಬಳಸಿಕೊಂಡು ಚೀನಾದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡಲಾಗ್ತಿದೆ. ಹೀಗಾಗಿ ಚೀನಾ ವಿರೋಧಿ ಈ ಕಾರ್ಯಕ್ರಮದಲ್ಲಿ ತಾವು ಭಾಗವಹಿಸಬೇಡಿ ಅಂತ ನಾವು ರಿಕ್ವೆಸ್ಟ್ ಮಾಡ್ತೀವಿ ಅಂತ ಹೇಳಿಕೆಯಲ್ಲಿದೆ.

-masthmagaa.com

 

Contact Us for Advertisement

Leave a Reply