ಒಲಿಂಪಿಕ್ಸ್​​ಗೆ ರಾಜತಾಂತ್ರಿಕ ಬಹಿಷ್ಕಾರ! ಚೀನಾ ಹೇಳಿದ್ದೇನು?

masthmagaa.com:
ಚೀನಾದ ಬೀಜಿಂಗ್​ನಲ್ಲಿ ಫೆಬ್ರವರಿಯಲ್ಲಿ ನಡೆಯಲಿರೋ ವಿಂಟರ್ ಒಲಿಂಪಿಕ್ಸ್​​ಗೆ ಅಮೆರಿಕ ರಾಜತಾಂತ್ರಿಕ ಬಹಿಷ್ಕಾರ ಹಾಕಿದ ಬೆನ್ನಲ್ಲೇ ಆಸ್ಟ್ರೇಲಿಯಾ, ಕೆನಡಾ, ಯುಕೆ ಕೂಡ ಅದೇ ಹಾದಿ ಹಿಡಿದಿವೆ. ಆದ್ರೆ ಇದ್ರಿಂದ ವಿಂಟರ್ ಒಲಿಂಪಿಕ್ಸ್​ಗೆ ಏನೂ ತೊಂದ್ರೆಯಾಗಲ್ಲ. ಇದಕ್ಕೆಲ್ಲಾ ನಾವು ಕೇರ್ ಮಾಡಲ್ಲ ಅಂತ ಚೀನಾ ಹೇಳಿದೆ. ಇದೇ ರೀತಿ ಇನ್ನೂ ಹಲವು ದೇಶಗಳು ರಾಜತಾಂತ್ರಿಕವಾಗಿ ಒಲಿಂಪಿಕ್ಸ್ ಬಹಿಷ್ಕರಿಸಿದ್ರೆ ಏನ್ ಮಾಡ್ತೀರಿ ಅನ್ನೋ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ಇಲಾಖೆ ವಕ್ತಾರ ವಾಂಗ್ ವೆನ್​ಬಿನ್​​, ಇದ್ರ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯತೆ ಇದೆ ಅಂತ ನನಗೆ ಅನ್ನಿಸ್ತಿಲ್ಲ. ಯಾಕಂದ್ರೆ ಈಗಾಗಲೇ ಹಲವಾರು ದೇಶಗಳು ಬೀಜಿಂಗ್​​​​​ ಒಲಿಂಪಿಕ್ಸ್​​​ಗೆ ಬೆಂಬಲ ಘೋಷಿಸಿವೆ ಅಂತ ಹೇಳಿದ್ದಾರೆ.
-masthmagaa.com

Contact Us for Advertisement

Leave a Reply