ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡ ಚೀನಾದ GDP

masthmagaa.com:

ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಚೀನಾದ GDP (ಒಟ್ಟು ದೇಶೀಯ ಉತ್ಪನ್ನ) ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ. 2020ರ ಮೊದಲ ತ್ರೈ ಮಾಸಿಕಕ್ಕಿಂತ 2021ರ ಮೊದಲ ತ್ರೈ ಮಾಸಿಕದಲ್ಲಿ ಚೀನಾದ ಜಿಡಿಪಿ 18.3 ಪರ್ಸೆಂಟ್​ನಷ್ಟು ಏರಿಕೆ ಕಂಡಿದೆ. ಚೀನಾ ಸರ್ಕಾರ ಬಿಡುಗಡೆ ಮಾಡಿದ ಅಧಿಕೃತ ಅಂಕಿಅಂಶಗಳಲ್ಲಿ ಇದು ಗೊತ್ತಾಗಿದೆ. ಚೀನಾದಲ್ಲಿ ಕ್ವಾರ್ಟರ್ಲಿ, ಅಂದ್ರೆ ಮೂರು ತಿಂಗಳಿಗೊಮ್ಮೆ ಜಿಡಿಪಿ ಬೆಳವಣಿಗೆ ದರ ದಾಖಲಿಸುವ ಪ್ರಕ್ರಿಯೆ ಆರಂಭವಾಗಿದ್ದು 1992ರಲ್ಲಿ. ಅಲ್ಲಿಂದ ಇಲ್ಲಿವರೆಗೆ ದಾಖಲಾದ ಅತಿಹೆಚ್ಚು ಜಿಡಿಪಿ ಬೆಳವಣಿಗೆ ಇದಾಗಿದೆ. ಕಳೆದ ವರ್ಷದ ಮೊದಲ ತ್ರೈ ಮಾಸಿಕದಲ್ಲಿ ಚೀನಾದ ಜಿಡಿಪಿ ಮೈನಸ್ 6.8 ಪರ್ಸೆಂಟ್​ ಕುಸಿದಿತ್ತು. 1992ರ ಬಳಿಕ ಮೊದಲ ಬಾರಿಗೆ ಚೀನಾದ ಜಿಡಿಪಿ ಮೈನಸ್​ಗೆ ಹೋಗಿತ್ತು. ಇದಕ್ಕೆ ಕಾರಣ ಚೀನಾದಲ್ಲಿ ಆರ್ಭಟಿಸಿದ್ದ ಕೊರೋನಾ ಮಹಾಮಾರಿ. ಅದಾದ ಬಳಿಕ ಕೊರೋನಾ ಹಾವಳಿ ಕಮ್ಮಿಯಾಗ್ತಾ ಬಂದಂತೆ ಚೀನಾದ ಜಿಡಿಪಿ ಏರ್ತಾ ಹೋಯ್ತು.. 2020ರ 2ನೇ ತ್ರೈ ಮಾಸಿಕದಲ್ಲಿ 3.2 ಪರ್ಸೆಂಟ್​, 3ನೇ ತ್ರೈ ಮಾಸಿಕದಲ್ಲಿ 4.9 ಪರ್ಸೆಂಟ್​, 4ನೇ ತ್ರೈ ಮಾಸಿಕದಲ್ಲಿ 6.5 ಪರ್ಸೆಂಟ್​ ಬೆಳವಣಿಗೆ ಹೊಂದಿತ್ತು. ಇದೀಗ 2021ರ ಮೊದಲ ತ್ರೈ ಮಾಸಿಕದಲ್ಲಿ ಬರೋಬ್ಬರಿ 18.3 ಪರ್ಸೆಂಟ್ ಬೆಳವಣಿಗೆ ಕಂಡಿದೆ.

-masthmagaa.com

Contact Us for Advertisement

Leave a Reply