ಚೀನಾದದಲ್ಲಿ ಕೊರೋನಾ ಸ್ಫೋಟ.. ಅಧಿಕಾರಿಗಳಿಗೆ ಶಿಕ್ಷೆ!

masthmagaa.com:

ಇತ್ತೀಚೆಗೆ ಚೀನಾದ ಶಿಯಾನ್ ಪ್ರಾಂತ್ಯದಲ್ಲಿ ಕೊರೋನಾ ಅಬ್ಬರ ಜೋರಾದ ಹಿನ್ನೆಲೆಯಲ್ಲಿ ಅಲ್ಲಿನ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಅಂತ ಚೀನಾ ಡಿಸಿಪ್ಲಿನರಿ ಬಾಡಿ ತಿಳಿಸಿದೆ. ಚೀನಾದಲ್ಲಿ ಫೆಬ್ರವರಿಯಲ್ಲಿ ವಿಂಟರ್ ಒಲಿಂಪಿಕ್ಸ್ ನಡೀತಿದ್ದು, ಝೀರೋ ಕೊರೋನಾ ಕೇಸಸ್​ ಕಡೆ ಚೀನಾ ಗಮನ ಹರಿಸ್ತಿದೆ. ಆದ್ರೆ ಶಿಯಾನ್ ಪ್ರಾಂತ್ಯದಲ್ಲಿ ಇತ್ತೀಚೆಗೆ ಕೊರೋನಾ ಸ್ಫೋಟಗೊಂಡಿತ್ತು. ನಿನ್ನೆ ಕೂಡ ಅಲ್ಲಿ ಒಂದೇ ದಿನ 49 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಹೀಗಾಗಿ 1.3 ಕೋಟಿ ಜನಸಂಖ್ಯೆ ಇರೋ ಆ ಇಡೀ ನಗರವನ್ನು ಬಂದ್ ಮಾಡಲಾಗಿದೆ. ಅಂದಹಾಗೆ ಚೀನಾದಲ್ಲಿ ಕೊರೋನಾ ನಿಯಂತ್ರಿಸುವಲ್ಲಿ ವಿಫಲವಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳೋದು ಇದೇ ಮೊದಲೇನಲ್ಲ.. ಈ ಹಿಂದೆಯೂ ಈ ರೀತಿ ಕ್ರಮ ಕೈಗೊಳ್ಳಲಾಗಿದೆ.

-masthmagaa.com

Contact Us for Advertisement

Leave a Reply