ಸಿಕ್ಕಿಬಿದ್ದ ಚೀನಿ ಗೂಢಚರ! ಅಮೆರಿಕದ ಕೋರ್ಟ್ ನಲ್ಲಿ ಶಿಕ್ಷೆ!

masthmagaa.com:

ಯಾಂಜುನ್ ಶು ಅನ್ನೋ ಚೀನಿ ಗೂಢಚರನಿಗೆ ಅಮೆರಿಕದ ಕೋರ್ಟ್ ಶಿಕ್ಷೆ ವಿಧಿಸಿದೆ. ಅಮೆರಿಕದ ಟ್ರೇಡ್ ಸೀಕ್ರೆಟ್ ಮತ್ತು ವೈಮಾನಿಕ ಕ್ಷೇತ್ರದ ಟೆಕ್ನಾಲಜಿ ಕಳ್ಳತನಕ್ಕೆ ಸಂಚು ರೂಪಿಸಿದ ಪ್ರಕರಣಗಳಲ್ಲಿ ಯಾಂಜುನ್ ಅಪರಾಧಿ ಅಂತ ಅಮೆರಿಕದ ಫೆಡರಲ್ ಜೂರಿ ತೀರ್ಪು ನೀಡಿದೆ. ಈತ ಒಬ್ಬ ಚೀನಿ ಪ್ರಜೆ. ಈತ ಚೀನಾದ ಜಿಯಾಂಗ್ಸು ಪ್ರಾಂತ್ಯದ ಸ್ಟೇಟ್ ಸೆಕ್ಯೂರಿಟಿ ಡಿಪಾರ್ಟ್ಮೆಂಟ್ ನ, ಆರನೇ ಬ್ಯೂರೋದ ಡೆಪ್ಯೂಟಿ ಡೈರೆಕ್ಟರ್ ಆಗಿದ್ದ ಅಂತ ಅಮೆರಿಕದ ಜಸ್ಟೀಸ್ ಡಿಪಾರ್ಟ್ಮೆಂಟ್ ಮಾಹಿತಿ ನೀಡಿದೆ. ಈತನನ್ನ 2018ರಲ್ಲಿ ಬೆಲ್ಜಿಯಂನಲ್ಲಿ ಬಂಧಿಸಲಾಗಿತ್ತು. ನಂತರ ಅಮೆರಿಕಾಗೆ ಗಡಿಪಾರು ಮಾಡಲಾಗಿತ್ತು. ಇದು ಇತಿಹಾಸದಲ್ಲಿ ಚೀನಾ ಗೂಢಚರ ನೊಬ್ಬನ ಮೊದಲ ಅಮೆರಿಕ ಗಡಿಪಾರು. ಈಗ ಈತನಿಗೆ 60 ವರ್ಷ ಜೈಲುಶಿಕ್ಷೆ ಹಾಗೂ 37 ಕೋಟಿ ರೂಪಾಯಿಗೂ ಅಧಿಕ ದಂಡ ವಿಧಿಸುವ ಸಾಧ್ಯತೆಯಿದೆ.

-masthmagaa.com

Contact Us for Advertisement

Leave a Reply