ಕಮಲ್, ರಜನಿ ರಾಜಕೀಯದಿಂದ ದೂರವಿದ್ದರೆ ಒಳ್ಳೆಯದು: ಚಿರಂಜೀವಿ

ತಮಿಳುನಾಡಲ್ಲಿ ರಾಜಕೀಯಕ್ಕೆ ಧುಮುಕಿರೋ ಕಮಲ್ ಹಾಸನ್ ಮತ್ತು ರಜನಿಕಾಂತ್‍ಗೆ ಮೆಗಾಸ್ಟಾರ್ ಚಿರಂಜೀವಿ ಬುದ್ಧಿ ಮಾತು ಹೇಳಿದ್ದಾರೆ. ತಮಿಳು ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ ಅವರು, ರಜನಿಕಾಂತ್ ಮತ್ತು ಕಮಲ್ ಹಾಸನ್ ರಾಜಕೀಯದಿಂದ ದೂರವೇ ಇದ್ದರೆ ಒಳ್ಳೆಯದು ಎಂದಿದ್ದಾರೆ. ಅಲ್ಲದೆ ನಾನು ಸಿನಿಮಾ ಕ್ಷೇತ್ರದಲ್ಲಿ ನಂಬರ್ 1 ಆಗಿದ್ದೆ. ನಂತರ ಏನಾದರೂ ಒಳ್ಳೆಯದು ಮಾಡಬೇಕು ಎಂದುಕೊಂಡು ಸಿನಿಮಾ ಕ್ಷೇತ್ರಕ್ಕೆ ಧುಮುಕಿದೆ. ಆದ್ರೆ ಇವತ್ತಿನ ರಾಜಕೀಯ ಕೇವಲ ದುಡ್ಡಿನ ಮೇಲೆ ನಡೆಯುತ್ತೆ. ಹೀಗಾಗಿಯೇ ನಾನು ನನ್ನ ಕ್ಷೇತ್ರದಲ್ಲೇ ಸೋತುಹೋದೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ನನ್ನ ಸಹೋದರ ಪವನ್ ಕಲ್ಯಾಣ್ ಗೂ ಅದೇ ಆಯ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಈಗಿನ ಕಾಲದಲ್ಲಿ ರಾಜಕಾರಣಿಯಾಗಿರಬೇಕಾದರೆ ಸೋಲು, ಅವಮಾನ, ನಿರಾಶೆ ಎಲ್ಲವನ್ನೂ ಎದುರಿಸಲು ಸಿದ್ಧವಾಗಿರಬೇಕು. ಕಮಲ್ ಹಾಸನ್ ಮತ್ತು ರಜನಿಕಾಂತ್ ಈ ಎಲ್ಲವನ್ನು ಎದುರಿಸಲು ಸಿದ್ಧವಾಗಿದ್ದಾರೆ, ಆ ಸಾಮಥ್ರ್ಯ ಅವರಲ್ಲಿದೆ ಅನ್ನೋ ನಂಬಿಕೆ ನನಗಿದೆ. ಹೀಗಿದ್ದರೆ ಅವರು ರಾಜಕೀಯದಲ್ಲಿ ಮುಂದುವರಿದು ಜನರಿಗಾಗಿ ಕೆಲಸ ಮಾಡಬಹುದು ಅಂದ್ರು. ಒಂದುವೇಳೆ ಎಲ್ಲವನ್ನೂ ಎದುರಿಸಲು ಸಾಧ್ಯವಿಲ್ಲ ಎಂದಾದರೆ ರಾಜಕೀಯದಿಂದ ದೂರ ಉಳಿಯೋದೇ ಒಳ್ಳೆಯದು ಎಂದು ಹೇಳಿದ್ದಾರೆ.

Contact Us for Advertisement

Leave a Reply