ಸಿಬಿಎಸ್​ಇ, ಸಿಐಎಸ್​​​​​​ಸಿಇ ಫಲಿತಾಂಶ ಯಾವಾಗ ಗೊತ್ತಾ..?

masthmagaa.com:

ಸಿಬಿಎಸ್​​ಇ 12ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆಯನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ. ಆದ್ರೆ ಫಲಿತಾಂಶ ನೀಡೋದು ಹೇಗೆ ಅನ್ನೋ ಗೊಂದಲಕ್ಕೆ ತಜ್ಞರ ಸಮಿತಿ ಪರಿಹಾರ ಕಂಡು ಹಿಡಿದಿದೆ. ಅಂದ್ರೆ 10 ಮತ್ತು 11ನೇ ತರಗತಿಯ ಅಂಕ ಮತ್ತು 12ನೇ ತರಗತಿಯ ಪೂರ್ವಸಿದ್ಧತಾ ಪರೀಕ್ಷೆಯ ಆಧಾರದಲ್ಲಿ ಫಲಿತಾಂಶ ನೀಡಲು ನಿರ್ಧರಿಸಲಾಗಿದೆ. ಅಂದ್ರೆ 10ನೇ ತರಗತಿಯ ಫಲಿತಾಂಶದ ಆಧಾರದಲ್ಲಿ 30, 11ನೇ ತರಗತಿ ಆಧಾರದಲ್ಲಿ 30 ಮತ್ತು 12ನೇ ತರಗತಿಯ ಪೂರ್ವ ಸಿದ್ಧತಾ ಪರೀಕ್ಷೆ ಆಧಾರದಲ್ಲಿ ಉಳಿದ ಅಂಕ ನೀಡುವಂತೆ ಫಾರ್ಮುಲಾ ಕೊಟ್ಟಿದೆ. ಈ ಯೋಜನೆಯನ್ನು ನಾಳೆ ಸಿಬಿಎಸ್​​ಇ ಸುಪ್ರೀಂಕೋರ್ಟ್​​​​​ಗೆ ಸಲ್ಲಿಸಲಿದೆ. ಮತ್ತೊಂದ್ಕಡೆ ಸಿಐಎಸ್​​ಸಿಇ ಅಂದ್ರೆ Council for Indian School Certificate Examinations ಕೂಡ 12ನೇ ತರಗತಿ ರಿಸಲ್ಟ್​ ಜುಲೈ 20ರ ಒಳಗಾಗಿ ಘೋಷಿಸಲು ಸಿದ್ಧತೆ ನಡೆಸಿದೆ. ಇದು ಇಂಟರ್​​ನಲ್ ಮಾರ್ಕ್ಸ್​​ ಮತ್ತು 5ರಿಂದ 10ನೇ ತರಗತಿವರೆಗಿನ ಪರ್ಫಾರ್ಮೆನ್ಸ್​ ಆಧಾರದಲ್ಲಿ ರಿಸಲ್ಟ್ ನೀಡಲು ನಿರ್ಧರಿಸಿದೆ.

-masthmagaa.com

 

Contact Us for Advertisement

Leave a Reply