ಡಾ. ರಾಜ್ ಮೊಮ್ಮಗಳ ಸಿನಿಮಾ ವೀಕ್ಷಿಸಲಿರುವ ಸಿ ಎಂ!

masthmagaa.com:

ಡಾ.ರಾಜ್ ಮೊಮ್ಮಗಳ ಚೊಚ್ಚಲ ಚಿತ್ರ ನಿನ್ನ ಸನಿಹಕೆ‌ ಸಿನಿಮಾವನ್ನ ಸಿ.ಎಂ ಬಸವರಾಜ್ ಬೊಮ್ಮಾಯಿ ವೀಕ್ಷಿಸಲಿದ್ದಾರೆ. ನಿನ್ನ ಸನಿಹಕೆ ಚಿತ್ರದ ಮೊದಲ ಟಿಕೆಟ್ ಸ್ವೀಕರಿಸಿದ ಸಿ.ಎಂ ಬಸವರಾಜ ಬೊಮ್ಮಾಯಿ ಚಿತ್ರದ ಪ್ರಿಮಿಯರ್ ವೀಕ್ಷಿಸಲಿದ್ದಾರೆ.

ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ಪಿ.ವಿ.ಆರ್ ಒರಾಯಾನ್ ಮಾಲ್ ನಲ್ಲಿ ಗುರುವಾರ ಸಂಜೆ 7ಗಂಟೆಗೆ ಪ್ರಿಮಿಯರ್ ಶೋ ಆಯೋಜನೆಯಾಗಿದ್ದು, ಡಾ.ರಾಜ್ ಕುಟುಂಬ ಸೇರಿದಂತೆ ಇಡೀ ಚಿತ್ರರಂಗದ ಗಣ್ಯಾತಿಗಣ್ಯರು ಭಾಗಿಯಾಗಲಿದ್ದಾರೆ.

ಸಿ.ಎಂ ಬಸವರಾಜ್ ಬೊಮ್ಮಾಯಿಯವರನ್ನ ನಿನ್ನೆ ಭೇಟಿ ಮಾಡಿದ ನಿನ್ನ ಸನಿಹಕೆ‌ ಚಿತ್ರತಂಡದ ನಾಯಕ ನಟ ಹಾಗೂ ನಿರ್ದೇಶಕ‌ ಸೂರಜ್ ಗೌಡ, ನಾಯಕಿ ಧನ್ಯ ರಾಮ್ ಕುಮಾರ್, ನಿರ್ಮಾಪಕರಾದ ಅಕ್ಷಯ್ ರಾಜಶೇಖರ್, ರಂಗನಾಥ್ ಕೂಡ್ಲಗಿ ಸಿ ಎಂ ಗೆ ಮೊದಲ ಟಿಕೆಟ್ ಮಾಡಿ ಆಹ್ವಾನಿಸಿದ್ದಾರೆ. ನಿನ್ನ ಸನಿಹಕೆ ಚಿತ್ರ ಇದೇ ಶುಕ್ರವಾರ ರಾಜ್ಯದಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ನಿನ್ನ ಸನಿಹಕೆ ಚಿತ್ರ ತೆರೆಗೆ ಬರಲಿದೆ.

-masthmagaa.com

Contact Us for Advertisement

Leave a Reply