ರಾಹುಲ್‌ ಗಾಂಧಿ ಪ್ರಧಾನಿಯಾಗ್ತಾರೆ: ಸಿಎಂ ಸಿದ್ಧರಾಮಯ್ಯ ಘೋಷಣೆ

masthmagaa.com:

ಸಿಎಂ ಸಿದ್ಧರಾಮಯ್ಯ ಒಂದು ಇಂಟ್ರಸ್ಟಿಂಗ್‌ ಹೇಳಿಕೆ ಕೊಟ್ಟಿದ್ದಾರೆ. ಒಂದು ಕಡೆ TMC, ಕೇಜ್ರಿವಾಲ್‌ ಎಲ್ರೂ ಸೇರ್ಕೊಂಡು ಮೋದಿ ವಿರುದ್ಧ ಖರ್ಗೆಯನ್ನ ಪಿಎಂ ಮಾಡಬೇಕು ಅಂತ ಹೇಳ್ತಿದ್ರೆ ಸಿದ್ಧರಾಮಯ್ಯ ಮಾತ್ರ ಮತ್ತೆ ರಾಹುಲ್‌ ಗಾಂಧಿ ಮಂತ್ರ ಪಠಿಸಿದ್ದಾರೆ. ಕಾಂಗ್ರೆಸ್‌ನ ಸಂಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿ, ರಾಹುಲ್‌ ಗಾಂಧಿ ಮುಂದೊಂದು ದಿನ ದೇಶದ ನೇತೃತ್ವ ವಹಿಸ್ಕೋತಾರೆ. ಪ್ರಧಾನಿಯಾಗ್ತಾರೆ. ಆ ಭರವಸೆ ನಂಗಿದೆ ಅಂತ ಹೇಳಿದ್ದಾರೆ. ಈ ಮೂಲಕ ಖರ್ಗೆಯನ್ನ ಪಿಎಂ ಫೇಸ್‌ ಮಾಡೋಕೆ ಗಾಂಧಿ ಕುಟುಂಬಕ್ಕಿರಲೀ ಇಲ್ಲಿರೋ ರಾಜ್ಯ ನಾಯಕರಿಗೂ ಇಷ್ಟ ಇಲ್ಲ ಅನ್ನೋ ತರ ಕಾಣ್ತಿದೆ. ಯಾಕಂದ್ರೆ ಖರ್ಗೆ ಪಿಎಂ ಕ್ಯಾಂಡಿಡೇಟ್‌ ಅನ್ನೋ ಚರ್ಚೆ ಎದ್ದಾಗ ರಾಹುಲ್‌ ಗಾಂಧಿ ಸೋನಿಯಾ ಗಾಂಧಿ ಎಲ್ರೂ ಮೌನಕ್ಕೆ ಶರಣಾಗಿದ್ರು. ಈ ಕಡೆ ರಾಜ್ಯ ನಾಯಕರು ಏನಾದ್ರೂ ಹೇಳ್ತಾರಾ ಅಂದ್ರೆ ಅವರೂ ಕೂಡ ತುಟಿ ಬಿಚ್ಚಿರಲಿಲ್ಲ. ಇದೆಲ್ಲದರ ಮಧ್ಯೆ ತಮ್ಮನ್ನ ತಾವು ಸಮಾಜವಾದಿ ನಾಯಕ ಅಂದ್ಕೊಳ್ಳೋ ಸಿದ್ಧರಾಮಯ್ಯ ಈಗ ಮತ್ತೆ ಗಾಂಧಿ ಕುಟುಂಬದ ಕುಡಿಯೇ ನಮ್ಮ ದೇಶಕ್ಕೆ ಪ್ರಧಾನಿಯಾಗಬೇಕು ಅಂತ ಇಚ್ಚೆ ವ್ಯಕ್ತಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply