ಸಚಿವ ಸಂಪುಟ ವಿಸ್ತರಿಸಿದ ಸಿಎಂ ಸಿದ್ದರಾಮಯ್ಯ! ಯಾರಿಗೆ ಯಾವ ಖಾತೆ?

masthmagaa.com:

ರಾಜ್ಯದ ಆಡಳಿತಕ್ಕೆ ಹೊಸ ಸಚಿವ ಸಂಪುಟ ರಚನೆಯಾಗಿದೆ. ಸಿಎಂ ಡಿಸಿಎಂ ಸೇರಿ 34 ಮಂದಿಯ ಪೂರ್ಣ ಪ್ರಮಾಣದ ಕ್ಯಾಬಿನೆಟ್‌ ರಚನೆಯಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್‌ ಜೊತೆ ಕಾಂಗ್ರೆಸ್‌ ಹೈಕಮಾಂಡ್‌ ಸತತ 3 ದಿನಗಳ ಕಾಲ ಸಮಾಲೋಚನೆ ನಡೆಸಿ ಅಂತಿಮವಾಗಿ ಹೊಸ ಸಚಿವರ ಪಟ್ಟಿಯನ್ನ ರಿಲೀಸ ಮಾಡಿದೆ. ಇವತ್ತು ರಿಲೀಸ್‌ ಆದ 24 ಹೊಸ ಸಚಿವರಿಗೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಪ್ರಮಾಣ ವಚನ ಬೋಧಿಸಿದ್ದಾರೆ. ಸಚಿವ ಸಂಪುಟ ರಚನೆಗೊಂಡ ಬೆನ್ನಲ್ಲೆ ಮಾತಾಡಿದ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್‌ ಪಕ್ಷ ಮತದಾರರಿಗೆ ನೀಡಿರೊ ಗ್ಯಾರಂಟಿಗಳನ್ನ ಶೀಘ್ರದಲ್ಲಿ ಅನುಷ್ಠಾನಕ್ಕೆ ತರುವ ಉದ್ದೇಶದಿಂದ ಸಂಪುಟದಲ್ಲಿನ ಎಲ್ಲ ಸ್ಥಾನಗಳನ್ನ ಭರ್ತಿ ಮಾಡಲಾಗಿದೆ. ಇದು ಹೊಸಬರು ಹಾಗೂ ಹಳಬರ ಮಿಶ್ರಣದ ಸಂಪುಟ. ಮೊದಲ ಬಾರಿ ಗೆದ್ದು ಬಂದಿರುವ ಯಾರನ್ನೂ ಸಂಪುಟಕ್ಕೆ ಸೇರಿಸಿಕೊಂಡಿಲ್ಲ. ಹೀಗಾಗಿ ಕೆಲ ಜಿಲ್ಲೆಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ ಅಂತ ಹೇಳಿದ್ದಾರೆ. ಇದೇ ವೇಳೆ ಎರಡು ವರ್ಷದ ಬಳಿಕ ಸಂಪುಟ ಪುನರಚನೆ ಮಾಡಿ ನಿಮಗೆ ಅವಕಾಶ ನೀಡಲಾಗುತ್ತೆ ಅಂತ ಸಚಿವ ಆಕಾಂಕ್ಷಿಗಳಿಗೆ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಇನ್ನು ಸಿಎಂ ಹಣಕಾಸು ಹಾಗೂ ಗುಪ್ತಚರ ಇಲಾಖೆ ತಮ್ಮ ಬಳಿಯೇ ಇಟ್ಟುಕೊಂಡಿದ್ರೆ, ಇತ್ತ ಡಿಕೆ ಶಿವಕುಮಾರ್‌, ಜಲ ಸಂಪನ್ಮೂಲ ಹಾಗೂ ಬೆಂಗಳೂರು ನಗರಾಭಿವೃದ್ದೀ ಖಾತೆಯನ್ನ ಇಟ್ಟುಕೊಂಡಿದ್ದಾರೆ. ಉಳಿದಂತೆ ಯಾವ ಸಚಿವರಿಗೆ ಯಾವ ಖಾತೆ ದೊರೆತಿದೆ ಅಂತ ಸಂಪೂರ್ಣ ವರದಿ ಮಾಡಲಾಗಿದೆ. ಅದನ್ನ ನೀವು ನೋಡಬಹುದು.

-masthmagaa.com

Contact Us for Advertisement

Leave a Reply