ದಕ್ಷಿಣ ಅಮೆರಿಕದಲ್ಲಿ ಭಾರಿ ಮಳೆ! ಭೂಕುಸಿತಕ್ಕೆ 4 ಬಲಿ

masthmagaa.com:

ದಕ್ಷಿಣ ಅಮೆರಿಕ ಖಂಡದಲ್ಲಿ ಬರೋ ಕೊಲಂಬಿಯಾದ ಡೋಸ್ಕೆಬ್ರೆದಾಸ್​​ನಲ್ಲಿ ಭಾರಿ ಮಳೆಗೆ ಭೂಕುಸಿತ ಉಂಟಾಗಿ ಕನಿಷ್ಠ 14 ಜನ ಮೃತಪಟ್ಟಿದ್ದಾರೆ. ಕನಿಷ್ಠ ಐದು ಮನೆಗಳ ಮೆಲೆ ಕೆಸರು ಬಂದು ಕೂತಿದ್ದು, ಕೆಸರಿನ ಅಡಿಯಲ್ಲಿ ಸಿಲುಕಿದವರನ್ನ ರಕ್ಷಿಸೋ ಕೆಲಸ ನಡೀತಿದೆ. ಮತ್ತೆ ಭೂಕುಸಿತ ಸಂಭವಿಸಬಹುದು ಅಂತ ಸುತ್ತಮುತ್ತಲಿನ ಜನರನ್ನ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಪರ್ವತಮಯ ಭೂಪ್ರದೇಶ, ಆಗಾಗ ಬರುವ ಧಾರಾಕಾರ ಮಳೆ, ಕಳಪೆ ಗುಣಮಟ್ಟದ ಮನೆ ನಿರ್ಮಾಣದಿಂದಾಗಿ ಕೊಲಂಬಿಯಾದಲ್ಲಿ ಭೂಕುಸಿತಗಳು ಕಾಮನ್ ಆಗಿವೆ. ರೀಸೆಂಟ್ ಅಂದ್ರೆ 2017ರಲ್ಲಿ ಮೊಕೊವಾದಲ್ಲಿ ಸಂಭವಿಸಿದ ಭೂಕುಸಿತದಲ್ಲಿ 320ಕ್ಕೂ ಹೆಚ್ಚು ಜನ ಪ್ರಾಣ ಕಳ್ಕೊಂಡಿದ್ರು.

-masthmagaa.com

Contact Us for Advertisement

Leave a Reply