ಉಗ್ರರ ದಾಳಿಗೆ 5 ಯೋಧರು ಸೇರಿ 7 ಮಂದಿ ಬಲಿ! ಬಿಡಲ್ಲ ಎಂದ ‘ನಮೋ’

masthmagaa.com:

ಮಯನ್ಮಾರ್​​ ಜೊತೆ ಗಡಿ ಹಂಚಿಕೊಂಡಿರೋ ಮಣಿಪುರದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಏಳು ಮಂದಿ ಪ್ರಾಣ ಕಳ್ಕೊಂಡಿದ್ದಾರೆ. ಅದ್ರಲ್ಲಿ ಸೇನೆಯ 46 ಅಸ್ಸಾಂ ರೈಫಲ್ಸ್​​ನ ಕರ್ನಲ್, ಅವರ ಪತ್ನಿ, 8 ವರ್ಷದ ಮಗ ಮತ್ತು ನಾಲ್ವರು ಯೋಧರು ಕೂಡ ಸೇರಿದ್ದಾರೆ. ಚುರಾಚಂದ್​​ಪುರ ಜಿಲ್ಲೆಯೊಲ್ಲಿ ಈ ಘಟನೆ ವರದಿಯಾಗಿದ್ದು, ಇಲ್ಲಿ ಇತ್ತೀಚಿನ ವರ್ಷಗಳಲ್ಲಿ ಉಗ್ರರು ನಡೆಸಿದ ಅತಿದೊಡ್ಡ ದಾಳಿ ಇದಾಗಿದೆ. ಕರ್ನಲ್ ವಿಪ್ಲವ್ ತ್ರಿಪಾಠಿ ಗಡಿಭಾಗದ ಫಾರ್ವರ್ಡ್ ಕ್ಯಾಂಪ್​​ಗಳಿಗೆ ಭೇಟಿ ನೀಡಿ ವಾಪಸ್ಸಾಗ್ತಿದ್ದಾಗ ಅವರ ವಾಹನದ ಮೇಲೆ ದಾಳಿ ನಡೆಸಲಾಗಿದೆ. ಈವರೆಗೆ ಯಾವುದೇ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲವಾದ್ರೂ, ಮಣಿಪುರ ಮೂಲದ ಪಿಎಲ್​ಎ ಅಂದ್ರೆ ಪೀಪಲ್ಸ್ ಲಿಬರೇಷನ್ ಆರ್ಮಿ ದಾಳಿ ಹಿಂದಿರೋ ಶಂಕೆ ವ್ಯಕ್ತವಾಗಿದೆ. ದಾಳಿ ನಡೆದ ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ನ್ಯಾಯ ಸಿಕ್ಕೇ ಸಿಗುತ್ತೆ ಅಂತ ಮಣಿಪುರ ಸಿಎಂ ಬಿರೇನ್ ಸಿಂಗ್ ಹೇಳಿದ್ದಾರೆ. ಈ ದಾಳಿಯನ್ನು ಪ್ರಧಾನಿ ಮೋದಿ ಕೂಡ ಖಂಡಿಸಿದ್ದು, ಕುಟುಂಬಸ್ಥರಿಗೆ ಸಂತಾಪ ಸೂಚಿಸಿದ್ದಾರೆ. ಯೋಧರ ಬಲಿದಾನವನ್ನು ಮರೆಯೋದಿಲ್ಲ ಅಂತ ಹೇಳಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಸಾಧ್ಯವಾದಷ್ಟು ಬೇಗ ಅಪರಾಧಿಗಳಿಗೆ ಶಿಕ್ಷೆ ವಿಧಿಸೋ ಮಾತಾಡಿದ್ದಾರೆ. ರಾಹುಲ್ ಗಾಂಧಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮೋದಿ ಸರ್ಕಾರ ದೇಶವನ್ನು ರಕ್ಷಿಸುವಲ್ಲಿ ಅಸಮರ್ಥವಾಗಿದೆ ಅನ್ನೋದು ಈ ದಾಳಿಯಿಂದ ಮತ್ತೊಮ್ಮೆ ಸಾಬೀತಾಗಿದೆ ಅಂತ ಟ್ವೀಟ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply