ಶಾಲಾ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಕಾಂಡೋಮ್‌: ಔಷಧ ನಿಯಂತ್ರಣ ಮಂಡಳಿಯಿಂದ ಮಹತ್ವದ ಹೆಜ್ಜೆ!

masthmagaa.com:

ಕಳೆದ ಕೆಲ ತಿಂಗಳ ಹಿಂದಷ್ಟೇ ಬೆಂಗಳೂರಿನ ಶಾಲೆವೊಂದ್ರಲ್ಲಿ ಇನ್ಸ್‌ಪೆಕ್ಷನ್ ಮಾಡೋ ವೇಳೆ ವಿದ್ಯಾರ್ಥಿಯ ಸ್ಕೂಲ್‌ ಬ್ಯಾಗ್‌ನಲ್ಲಿ ಕಾಂಡೋಮ್ ಪತ್ತೆಯಾಗಿತ್ತು. ಈ ಸಂಗತಿ ಹೊರ ಬೀಳ್ತಾ ಇದ್ದಂತೆ ಎಲ್ರಿಗೂ ತಲೆಬಿಸಿ ತಂದು ಕೊಡ್ತು. ಆದ್ರಿಂದ ಇದೀಗ ರಾಜ್ಯ ಔಷಧ ನಿಯಂತ್ರಣ ಮಂಡಳಿ ಮಹತ್ವದ ಆದೇಶಕ್ಕೆ ಮುಂದಾಗಿದೆ. ಕಳೆದ ವಾರ ಆರೋಗ್ಯ ಸಚಿವರ ಸಭೆ ನಡೆಸಿದ್ದ ಔಷಧ ನಿಯಂತ್ರಣ ಮಂಡಳಿ 18 ವರ್ಷದೊಳಗಿನ ಮಕ್ಕಳಿಗೆ ಕಾಂಡೋಮ್, ಗರ್ಭ ನಿರೋಧಕ ಮಾತ್ರೆ ಹಾಗೂ ಉತ್ತೇಜಕ ಮಾತ್ರೆಗಳನ್ನ ಕೊಡಬಾರ್ದು ಅಂತ ಮೆಡಿಕಲ್ ಶಾಪ್ ಗಳಿಗೆ ಖಡಕ್ಕಾಗಿ ವಾರ್ನ್‌ ಮಾಡಿದೆ. ಕಾಂಡೋಮ್ ಅಥವಾ ಗರ್ಭ ನಿರೋಧಕ ಮಾತ್ರೆಗಳನ್ನ ಆನ್ ದಿ ಕೌಂಟರ್ ಕೊಡಬಾರ್ದು ಅಂತ ರಿಸ್ಟ್ರಿಕ್ಟ್ ಮಾಡಿದೆ. ಅಂದ್ರೆ ಡೈರೆಕ್ಟ್‌ ಮೆಡಿಕಲ್‌ ಶಾಪ್‌ಗಳಿಗೆ ಬಂದು ಕೇಳಿದ ತಕ್ಷಣ ಇತರೆ ಔಷಧಗಳನ್ನ ನೀಡೋ ತರ ಇದನ್ನ ನೀಡ್ಬಾರ್ದು ಅಂತ ಅರ್ಥ. 18 ವರ್ಷದೊಳಗಿನ ಮಕ್ಕಳು ಇವುಗಳನ್ನ ಕೇಳಿದ್ರೆ, ನಿರಾಕರಿಸುವಂತೆ ಸೂಚಿಸಿದೆ. ಈಗಾಗ್ಲೇ ಎಲ್ಲಾ ಮೆಡಿಕಲ್ ಶಾಪ್‌ಗಳಿಗೆ ರಾಜ್ಯ ಔಷಧ ನಿಯಂತ್ರಣ ಮಂಡಳಿ ವಾರ್ನಿಂಗ್‌ ನೀಡಿದೆ.

-masthmagaa.com

Contact Us for Advertisement

Leave a Reply