ನಟಿ ಧನ್ಯಾ ರಾಮ್‌ಕುಮಾರ್‌ಗೆ ಕೋರೊನಾ ಸೋಂಕು!

masthmagaa.com:

ಡಾ.ರಾಜ್ ಕುಟುಂಬದ ಕುಡಿ ನಟಿ ಧನ್ಯಾ ರಾಮ್‌ಕುಮಾರ್‌ಗೆ ಕೊರೋನಾ ಸೋಂಕು ತಗುಲಿದೆ. ಮಾರ್ಚ್‌ 23 ರಂದು ಧನ್ಯಾ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಈ ಬಗ್ಗೆ ಸ್ವತಃ ತಾವೇ ಮಾಹಿತಿ ನೀಡಿದ್ದಾರೆ. ʻಎಲ್ಲರಿಗೂ ಹಾಯ್‌, ಮೊನ್ನೆ ಕೋವಿಡ್‌ 19 ಟೆಸ್ಟ್‌ ಮಾಡಿಸಿದಾಗ ನನಗೆ ಕೋವಿಡ್‌ 19 ಪಾಸಿಟಿವ್‌ ಬಂದಿದೆ. ಸದ್ಯಕ್ಕೆ ನಾನು ಐಸೋಲೇಟ್‌ ಆಗಿರುವೆ ಹಾಗೂ ಆದಷ್ಟು ಬೇಗ ಹುಶಾರಾಗಲು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಂಡಿರುವೆ. ಆರೋಗ್ಯವನ್ನ ಚೆನ್ನಾಗಿ ಕಾಪಾಡಿಕೊಳ್ಳುವುದು ನಿಮ್ಮೆಲ್ಲರ ಮೊದಲ ಪ್ರಾಮುಖ್ಯತೆ ಆಗಬೇಕು ಎಂದು ಎಲ್ಲರಿಗೂ ನೆನಪಿಸುತ್ತೇನೆ. ಈ ಸಮಯದಲ್ಲಿ ನಾನು ಹೇಗೆ ಕೋವಿಡ್‌ 19 ಚಿಕಿತ್ಸೆ ಪಡೆಯುತ್ತಿದ್ದೇನೆ ಎಂಬುದನ್ನ ನಿಮಗೆ ಅಪ್‌ಡೇಟ್‌ ಮಾಡುತ್ತೇನೆ. ಈ ಸಮಯದಲ್ಲಿ ನೀವು ನನ್ನನ್ನ ‌ಅರ್ಥಮಾಡಿಕೊಂಡಿರುವುದನ್ನು ಹಾಗೂ ನನಗೆ ಬೆಂಬಲ ನೀಡುತ್ತರುವುದನ್ನು ತುಂಬಾ ಗೌರವಿಸುತ್ತೇನೆ. ಎಲ್ಲರೂ ಆರೋಗ್ಯದ ಕಡೆ ಗಮನ ನೀಡಿʼ ಎಂದು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಧನ್ಯಾ ಬರೆದುಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply