ಚೀನಾದ ಜನಸಂಖ್ಯೆಯ 80% ಜನರಿಗೆ ಕೋವಿಡ್‌ ಸೋಂಕು!

masthmagaa.com:

ಕೊರೊನಾಗೆ ಹೆದರಿ ಬರೋಬ್ಬರಿ ಮೂರು ವರ್ಷಗಳ ಕಾಲ ಬಂದ್‌ ಆಗಿದ್ದ ಚೀನಾದಲ್ಲಿ ಈಗ ಸುನಾಮಿ ರೀತಿಯಲ್ಲಿ ಕೊರೊನಾ ಸೋಂಕು ಹರಡ್ತಾ ಇದೆ. ಕೊರೊನಾ ಕುರಿತು ಚೀನಾ ಸರ್ಕಾರ ಕೊಡ್ತಿರೋ ಒಂದೊಂದೇ ಮಾಹಿತಿಗಳು ಈಗ ಇಡೀ ಜಗತ್ತನ್ನೇ ದಂಗುಬಡಿಸ್ತಾ ಇವೆ. ಕೇವಲ ಒಂದೇ ಒಂದು ಪ್ರಕರಣ ಬಂದ್ರೂ ಇಡೀ ನಗರವನ್ನೇ ಸೀಲ್‌ ಡೌನ್‌ ಮಾಡ್ತಿದ್ದ ದೇಶದಲ್ಲಿ ಈಗ ಕೊರೊನಾ ಎಷ್ಟರ ಮಟ್ಟಗೆ ವ್ಯಾಪಿಸಿ ಬಿಟ್ಟಿದೆ ಅಂದ್ರೆ… ಈಗಾಗಲೇ ಚೀನಾದಲ್ಲಿರೋ ಸುಮಾರು 140 ಕೋಟಿ ಜನಸಂಖ್ಯೆಯ ಪೈಕಿ ಸುಮಾರು 80% ಜನ್ರಿಗೆ ಕೋವಿಡ್‌ ಸೋಂಕು ತಗುಲಿದೆ ಅಂತ ಖುದ್ದು ಚೀನಾ ಸರ್ಕಾರ ಮಾಹಿತಿ ಕೊಟ್ಟಿದೆ. ಚೀನಾದ ಡಿಸೀಸ್‌ ಕಂಟ್ರೋಲ್‌ ಕೇಂದ್ರದ ತಜ್ಞರು ಬೆಚ್ಚಿಬೀಳಿಸುವ ಮಾಹಿತಿ ಹೊರಹಾಕಿದ್ದಾರೆ. ಜೊತೆಗೆ ನಮ್ಮ ದೇಶದಲ್ಲಿ ಆಸ್ಪತ್ರೆಗಳು, ಕ್ಲಿನಿಕ್‌ಗಳಲ್ಲಿ ಎಮರ್ಜೆನ್ಸಿ ಪರಿಸ್ಥಿತಿಯನ್ನ ಫೇಸ್‌ ಮಾಡ್ತಿದ್ದು, ಕೋವಿಡ್‌ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ ಅಂತ ತಿಳಿಸಿದ್ದಾರೆ. ಅಂದಹಾಗೆ ಮೊನ್ನೆ ಮೊನ್ನೆಯಷ್ಟೇ ಡಿಸೆಂಬರ್‌ ತಿಂಗಳಲ್ಲಿ 60 ಸಾವಿರ ಜನ ಚೀನಾದಲ್ಲಿ ಕೊರೊನಾಗೆ ಸತ್ತೋಗಿದ್ದಾರೆ ಅಂತ ಚೀನಾ ಸರ್ಕಾರ ಅನೌನ್ಸ್‌ ಮಾಡಿತ್ತು. ಅಲ್ದೇ ಇತ್ತೀಚಿಗೆ ತಾನೇ ಚೀನಾದಲ್ಲಿ ಕೊವಿಡ್‌ ಹರಡ್ತಿರೋ ರೀತಿ ನೋಡಿ ಅಧ್ಯಕ್ಷ ಜಿನ್‌ ಪಿಂಗ್‌ ತೀವ್ರ ಚಿಂತೆಯಲ್ಲಿದ್ದಾರೆ..ತುಂಬಾ ಭೀತಿಯಲ್ಲಿದ್ದಾರೆ ಅಂತ ಅಲ್ಲಿನ ಸರ್ಕಾರಿ ಮಾಧ್ಯಮವೇ ವರದಿ ಮಾಡಿತ್ತು. ನಾಳೆ ಅಂದ್ರೆ ಜನವರಿ 22ರಂದು ಚೀನಾದಲ್ಲಿ ಹೊಸ ವರ್ಷ ಆಚರಣೆ ಆಗ್ತಾಯಿದೆ. ಇದು ಮತ್ತಷ್ಟು ಕೊರೊನಾ ಹರಡೋಕೆ ಕಾರಣವಾಗಲಿದೆ ಅಂತ ತಜ್ಞರು ಅಭಿಪ್ರಾಯ ಹೇಳಿದ್ದಾರೆ. ಕೊರೊನಾ ರೂಲ್ಸ್‌ ಅನ್ನ ಏಕಾಏಕಿ ತೆಗೆದು ಹಾಕಿದ್ದೇ ಈ ಪರಿ ಕೊರೊನಾ ಹೆಚ್ಚಾಗೋಕೆ ಕಾರಣ ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply