ಸೀರಂನಿಂದಲೂ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದನೆ!

masthmagaa.com:

ಭಾರತದಲ್ಲೇ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದಿಸಲು ಸೀರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಡಿಸಿಜಿಐ ಷರತ್ತು ಬದ್ಧ ಅನುಮತಿ ನೀಡಿದೆ. ಸ್ಪುಟ್ನಿಕ್ ವಿ ಲಸಿಕೆಯ ಸಂಸ್ಥೆ ಗಮಲೇಯ ರಿಸರ್ಚ್​ ಇನ್​​ಸ್ಟಿಟ್ಯೂಟ್ ಜೊತೆ ಮಾಡಿಕೊಂಡ ತಂತ್ರಜ್ಞಾನ ಒಪ್ಪಂದದ ಪ್ರತಿಯನ್ನು ಸಲ್ಲಿಸೋದು ಕೂಡ ಆ ಷರತ್ತುಗಳಲ್ಲೊಂದಾಗಿದೆ. ಸದ್ಯ ಕೋವಿಶೀಲ್ಡ್​ ಲಸಿಕೆ ಉತ್ಪಾದಿಸುತ್ತಿರೋ ಸೇರಂ ಇನ್​ಸ್ಟಿಟ್ಯೂಟ್​​​ ಸ್ಪುಟ್ನಿಕ್ ವಿ ಲಸಿಕೆಯ ಉತ್ಪಾದನೆ ಮತ್ತು ಪರೀಕ್ಷೆಗೆ ಅನುಮತಿ ನೀಡುವಂತೆ ಇತ್ತೀಚೆಗಷ್ಟೇ ಅರ್ಜಿ ಸಲ್ಲಿಸಿತ್ತು.

-masthmagaa.com

Contact Us for Advertisement

Leave a Reply