ಲಸಿಕೆ ಹಾಕಿಸಿಕೊಂಡ 15 ನಿಮಿಷದಲ್ಲಿ ವ್ಯಕ್ತಿ ಸಾವು!

masthmagaa.com:

ಮಹಾರಾಷ್ಟ್ರ: ಕೊರೋನಾ ಲಸಿಕೆ 2ನೇ ಡೋಸ್ ಹಾಕಿಸಿಕೊಂಡ 15 ನಿಮಿಷಗಳಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಭೀವಂಡಿಯ ಸುಖದೇವ್ ಕಿರ್ದತ್​ ಮೃತ ದುರ್ದೈವಿ. ಕಣ್ಣಿನ ತಜ್ಞರ ಜೊತೆ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಇವರಿಗೆ ಜನವರಿ 28ರಂದು ಮೊದಲ ಡೋಸ್ ನೀಡಲಾಗಿತ್ತು. ಆಗ ಯಾವುದೇ ಸಮಸ್ಯೆಗಳು ಕಾಣಿಸಿಕೊಂಡಿರಲಿಲ್ಲ.

ಅದರಂತೆ ನಿನ್ನೆ 2ನೇ ಡೋಸ್ ಹಾಕಿಸಿಕೊಂಡಿದ್ರು. ಅಬ್ಸರ್ವೇಷನ್​​ನಲ್ಲಿ ಇದ್ದಾಗಲೇ ಇದ್ದಕ್ಕಿದ್ದಂತೆ ತಲೆ ತಿರುಗಿ ಬಿದ್ದಿದ್ದಾರೆ. ನಂತರ ಅವರನ್ನು ಇಂದಿರಾ ಗಾಂಧಿ ಮೆಮೋರಿಯಲ್ ಆಸ್ಪತ್ರೆಗೆ ಕರೆದೊಯ್ಯಲಾಯ್ತಾದ್ರೂ ಪ್ರಯೋಜನವಾಗಲಿಲ್ಲ. ಆದ್ರೆ ಸಾವಿಗೆ ಕಾರಣ ಏನು ಅನ್ನೋದು ಇನ್ನೂ ಗೊತ್ತಾಗಿಲ್ಲ.. ಪೋಸ್ಟ್​ ಮಾರ್ಟಮ್ ವರದಿ ಬಂದ ಬಳಿಕ ಎಲ್ಲವೂ ಸ್ಪಷ್ಟವಾಗಲಿದೆ ಅಂತ ವೈದ್ಯರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply