‘ಕೋವಾಕ್ಸಿನ್​’ ಲಸಿಕೆ ಬೇಡವೆಂದ ಛತ್ತೀಸ್​ಗಢ​ ಸರ್ಕಾರಕ್ಕೆ ಕೇಂದ್ರದ ಉತ್ತರ

masthmagaa.com:

ಹೈದ್ರಾಬಾದ್​ ಮೂಲದ ಭಾರತ್ ಬಯೋಟೆಕ್​ ಅಭಿವೃದ್ಧಿಪಡಿಸಿರುವ ‘ಕೋವಾಕ್ಸಿನ್’ ಕೊರೋನಾ ಲಸಿಕೆ ಬಗ್ಗೆಗಿನ ಅನುಮಾನ, ಚರ್ಚೆಗಳು ಇನ್ನೂ ನಿಂತಿಲ್ಲ. ಇತ್ತೀಚೆಗೆ ಛತ್ತೀಸ್​ಗಢ​ ಸರ್ಕಾರ ಈ ಲಸಿಕೆ ಬಗ್ಗೆ ಕೆಲವೊಂದು ಅನುಮಾನ ವ್ಯಕ್ತಪಡಿಸಿತ್ತು. ಲಸಿಕೆಯ 3ನೇ ಹಂತದ ಮಾನವ ಪ್ರಯೋಗದ ಅಂಕಿ-ಅಂಶಗಳು ಸಿಗ್ತಿಲ್ಲ. ಲಸಿಕೆ ಮೇಲೆ ಎಕ್ಸ್​ಪೈರಿ ಡೇಟ್​ ಕೂಡ ಸರಿಯಾಗಿ ಪ್ರಿಂಟ್ ಮಾಡಿಲ್ಲ ಅಂತೆಲ್ಲಾ ಹೇಳಿತ್ತು. ಹೀಗಾಗಿ ಕೋವಾಕ್ಸಿನ್​ ಲಸಿಕೆಯ ಪೂರೈಕೆಯನ್ನ ನಿಲ್ಲಿಸುವಂತೆ ಮನವಿ ಮಾಡಿತ್ತು. ಈ ಸಂಬಂಧ ಛತ್ತೀಸ್​ಗಢ​ ಆರೋಗ್ಯ ಸಚಿವರಿಗೆ ಪತ್ರ ಬರೆದಿರೋ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಎಲ್ಲವನ್ನೂ ನೋಡಿಕೊಂಡೇ ಭಾರತದ ಔಷಧ ನಿಯಂತ್ರಣ ನಿರ್ದೇಶನಾಲಯ ಕೋವಾಕ್ಸಿನ್​ ಲಸಿಕೆಯ ಉತ್ಪಾದನೆಗೆ ಅನುಮತಿ ಕೊಟ್ಟಿರೋದು. ದೇಶದಲ್ಲಿ ಅನುಮೋದನೆಗೊಂಡಿರೋ ಎರಡೂ ಲಸಿಕೆಗಳು ಕೂಡ ಸುರಕ್ಷಿತವಾಗಿವೆ, ಕೊರೋನಾ ವಿರುದ್ಧ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತವೆ. ಇನ್ನು ಎಕ್ಸ್​ಪೈರಿ ಡೇಟ್​ ಕಾಣ್ತಿಲ್ಲ ಅನ್ನೋ ವಿಚಾರಕ್ಕೆ ಬಂದ್ರೆ, ನಿಮ್ಮ ಈ ವಾದ ಆಧಾರರಹಿತವಾಗಿದೆ. ಎಕ್ಸ್​ಪೈರಿ ಡೇಟನ್ನ ಲಸಿಕೆ ಮೇಲಿನ ಲೇಬಲ್​ ಮೇಲೆ ಹಾಕಲಾಗಿದೆ ನೋಡಿ ಅಂತ ಹೇಳಿದ್ದಾರೆ. ಅಂದ್ಹಾಗೆ 3ನೇ ಹಂತದ ಮಾನವ ಪ್ರಯೋಗ ಮುಗಿಯೋದಕ್ಕಿಂತ ಮೊದಲೇ ಕೋವಾಕ್ಸಿನ್ ಲಸಿಕೆಗೆ ಅನುಮೋದನೆ ಕೊಡಲಾಗಿದೆ, ಈ ಲಸಿಕೆ ಪಡೆದವರಲ್ಲಿ ಅಡ್ಡಪರಿಣಾಮ ಜಾಸ್ತಿ ಕಂಡುಬರುತ್ತಿದೆ ಅನ್ನೋ ಆರೋಪ ಈ ಹಿಂದೆ ಕೇಳಿ ಬಂದಿತ್ತು.

-masthmagaa.com

Contact Us for Advertisement

Leave a Reply