ಕೋವಾಕ್ಸಿನ್ ಲಸಿಕೆ 2ನೇ ಹಂತದಲ್ಲೂ ಸೇಫ್: ಪ್ರತಿಷ್ಠಿತ ಲ್ಯಾನ್ಸೆಟ್​​ ಜರ್ನಲ್​

masthmagaa.com:

ಭಾರತ್ ಬಯೋಟೆಕ್​ ಮತ್ತು ಐಸಿಎಂಆರ್ ಅಭಿವೃದ್ಧಿಪಡಿಸಿರೋ ಕೋವಾಕ್ಸಿನ್ ಲಸಿಕೆ ಸುರಕ್ಷಿತ ಮತ್ತು ಮೊದಲ ಹಂತದ ಮಾನವ ಪ್ರಯೋಗಕ್ಕೆ ಹೋಲಿಸಿದ್ರೆ ಎರಡನೇ ಹಂತದಲ್ಲಿ ಇನ್ನೂ ಒಳ್ಳೆ ರಿಸಲ್ಟ್ ಬಂದಿದೆ ಅಂತ ಬ್ರಿಟನ್​ನ ಪ್ರತಿಷ್ಠಿತ ಮೆಡಿಕಲ್ ಜರ್ನಲ್​ ದಿ ಲ್ಯಾನ್ಸೆಟ್​​ನಲ್ಲಿ ಪ್ರಕಟವಾಗಿದೆ. ಜೊತೆಗೆ ಕೋವಾಕ್ಸಿನ್ ಲಸಿಕೆಯಿಂದ ಗಂಭೀರ ಮತ್ತು ಜೀವಕ್ಕೆ ಕುತ್ತು ತರುವಂತಹ ಅಪಾಯವಿಲ್ಲ. ಉಳಿದಂತೆ ಕೆಲವರಿಗೆ ಲಸಿಕೆ ಹಾಕಿದ ಬಳಿಕ ಇಂಜೆಕ್ಷನ್ ಚುಚ್ಚಿದ ಜಾಗದಲ್ಲಿ ಸ್ವಲ್ಪ ನೋವು, ತಲೆ ನೋವು, ಆಯಾಸ ಮತ್ತು ಜ್ವರದಂತಹ ಸಣ್ಣ ಅಡ್ಡಪರಿಣಾಮ ಕಂಡುಬಂದಿದೆ ಅಂತ ವರದಿಯಲ್ಲಿ ಹೇಳಲಾಗಿದೆ. ಇತ್ತೀಚೆಗಷ್ಟೇ ಮೂರನೇ ಹಂತದ ಪ್ರಯೋಗದ ವೇಳೆ ಕೋವಾಕ್ಸಿನ್ ಲಸಿಕೆ 81 ಪರ್ಸೆಂಟ್ ಪರಿಣಾಮಕಾರಿ ಅಂತ ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ ಘೋಷಿಸಿಕೊಂಡಿತ್ತು.

-masthmagaa.com

Contact Us for Advertisement

Leave a Reply