ನಾಳೆ ಲಾಕ್​ಡೌನ್ ಭವಿಷ್ಯ.. ಯಾವುದಕ್ಕೆಲ್ಲಾ ಬೀಳುತ್ತೆ ಬೀಗ..?

masthmagaa.com:

ರಾಜ್ಯದಲ್ಲಿ, ಬೆಂಗಳೂರಿನಲ್ಲಿ ಕೊರೋನಾ ಹಾವಳಿ ಹೆಚ್ಚಾಗಿರೋ ಬೆನ್ನಲ್ಲೇ ಅದನ್ನ ಕಂಟ್ರೋಲ್ ಮಾಡೋಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸೋಮವಾರ ಮಹತ್ವದ ಸಭೆ ನಡೆಸಲಿದೆ. ಈ ಸಭೆಯಲ್ಲೇ ಹೊಸ ರೂಲ್ಸ್​, ನಿರ್ಬಂಧಗಳ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಇದ್ರ ಜೊತೆಗೆ ಬೆಂಗಳೂರು ಸೇರಿದಂತೆ ಕೆಲ ಜಿಲ್ಲಾ ಕೇಂದ್ರಗಳಲ್ಲಿ ಜಾರಿಗೆ ಬಂದಿರೋ ನೈಟ್​ ಕರ್ಫ್ಯೂ ಎಷ್ಟುದಿನ ವಿಸ್ತರಣೆಯಾಗುತ್ತೆ? ಬೇರೆ ಯಾವ ಜಿಲ್ಲಾ ಕೇಂದ್ರದಲ್ಲಿ ಹೊಸದಾಗಿ ನೈಟ್​ ಕರ್ಫ್ಯೂ ಜಾರಿಗೆ ಬರುತ್ತೆ? ಅನ್ನೋದು ಕೂಡ ನಾಳೆ ಗೊತ್ತಾಗಲಿದೆ. ಇಡೀ ರಾಜ್ಯವನ್ನಾಗಲೀ ಅಥವಾ ಬೆಂಗಳೂರನ್ನಾಗಲೀ ಲಾಕ್​ಡೌನ್​ ಮಾಡುವ ಚಿಂತನೆಯೇ ಇಲ್ಲ ಅಂತ ಹೇಳ್ತಾ ಬರ್ತಿರೋ ರಾಜ್ಯ ಸರ್ಕಾರ, ಲಾಕ್​ಡೌನ್​ ಬಿಟ್ಟು ಬೇರೆ ರೀತಿಯ ಕಠಿಣ ನಿರ್ಬಂಧಗಳನ್ನ ಜಾರಿಗೆ ತರುವ ಸಾಧ್ಯತೆ ದಟ್ಟವಾಗಿದೆ. ಅದು ವೀಕೆಂಡ್​ ಕರ್ಫ್ಯೂ ಆಗಿರಬಹುದು, ಸಂಡೇ ಒಂದುದಿನ ಮಾತ್ರ ಲಾಕ್​ಡೌನ್ ಮಾಡುವ ನಿರ್ಧಾರ ಆಗಿರಬಹುದು ಅಥವಾ ಬೇರೆ ಯಾವುದಾದ್ರೂ ನಿರ್ಬಂಧ ಜಾರಿಗೆ ಬರಬಹುದು. ಈ ಬಗ್ಗೆ ಇವತ್ತು ಮಾತನಾಡಿರೋ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಬೆಂಗಳೂರಿನಲ್ಲಿ ಕಠಿಣ ನಿಯಮಗಳನ್ನ ಜಾರಿಗೆ ತರಲಾಗುತ್ತೆ ಅಂತ ಹೇಳಿದ್ದಾರೆ. ಜೊತೆಗೆ ಕೊರೋನಾ ಸೋಂಕು ಈಗ ಸಮುದಾಯ ಮಟ್ಟದಲ್ಲಿ ಹರಡುತ್ತಿದೆ. ಕೆಲ ರಾಜ್ಯಗಳಲ್ಲಿ ಪಾಸಿಟಿವಿಟಿ ರೇಟ್ 20 ಪರ್ಸೆಂಟ್ ದಾಟಿ ಹೋಗಿರೋದೇ ಇದಕ್ಕೆ ಸಾಕ್ಷಿ ಅಂತ ಡಾ.ಕೆ. ಸುಧಾಕರ್ ಹೇಳಿದ್ಧಾರೆ. ಮತ್ತೊಂದುಕಡೆ ಕಂದಾಯ ಸಚಿವ ಆರ್​. ಅಶೋಕ್ ಕೂಡ, ಲಾಕ್​ಡೌನ್ ಇಲ್ಲ, ಕಠಿಣ ರೂಲ್ಸ್ ಮಾತ್ರ ಎಂದಿದ್ದಾರೆ.

-masthmagaa.com

Contact Us for Advertisement

Leave a Reply