ಕೊರೋನಾಗೆ ಭಾರತದ ಹೊಸ ಲಸಿಕೆ..! ಇದಕ್ಕೆ ಫ್ರಿಡ್ಜೇ ಬೇಕಾಗಿಲ್ಲ!

masthmagaa.com:

ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ಬಯೋಟೆಕ್ ಕಂಪನಿ ಮಿನ್​ ವ್ಯಾಕ್ಸ್​ ಸಂಸ್ಥೆಗಳು ಸೇರ್ಕೊಂಡು ಒಂದು ಹೊಸ ರೀತಿಯ ವ್ಯಾಕ್ಸಿನ್ ಕಂಡು ಹಿಡಿದಿವೆ. ಅದೇ ವಾರ್ಮ್ ವ್ಯಾಕ್ಸಿನ್.. ಉಳಿದೆಲ್ಲಾ ವ್ಯಾಕ್ಸಿನ್​​ಗಳನ್ನು ಕಡಿಮೆ ತಾಪಮಾನದಲ್ಲಿ ಸ್ಟೋರೇಜ್ ಮಾಡಿ ಇಡಬೇಕು. ಲಸಿಕೆ ಸಂಗ್ರಹಣೆಯಲ್ಲಿ ಇದೊಂದು ದೊಡ್ಡ ಸವಾಲು. ಆದ್ರೆ ಈ ಲಸಿಕೆಯನ್ನು ಸಾಮಾನ್ಯ ವಾತಾವರಣದಲ್ಲೇ ಸಂಗ್ರಹಿಸಿಡಬಹುದಾಗಿದೆ. ಇದು 100 ಡಿಗ್ರಿ ಸೆಲ್ಶಿಯಸ್ ತಾಪಮಾನದಲ್ಲೂ 90 ನಿಮಿಷಗಳವರೆಗೆ ಇರುತ್ತೆ. ಅದೇ ರೀತಿ 37 ಡಿಗ್ರಿ ಸೆಲ್ಶಿಯಸ್ ತಾಪಮಾನದಲ್ಲಿ ಒಂದು ತಿಂಗಳವರೆಗೆ ಸ್ಥಿರವಾಗಿ ಇರುತ್ತೆ. ಈಗಾಗಲೇ ಈ ಲಸಿಕೆಯನ್ನು ಆಸ್ಟ್ರೇಲಿಯಾ ಮೂಲದ ಕಾಮನ್​ವೆಲ್ತ್​ ಸೈಂಟಿಫಿಕ್ & ಇಂಡಸ್ಟ್ರಿಯಲ್ ರಿಸರ್ಚ್​ ಆರ್ಗನೈಸೇಷನ್​ ತಜ್ಞರು ವಿಶ್ಲೇಷಣೆ ನಡೆಸಿದ್ದು, ಕೊರೋನಾದ ವಿವಿಧ ರೂಪಾಂತರಿಗಳ ವಿರುದ್ಧವೂ ಪ್ರತಿಕಾಯವನ್ನು ಸೃಷ್ಟಿಸುವಲ್ಲಿ ಈ ಲಸಿಕೆ ಯಶಸ್ವಿಯಾಗಿದೆ. ಇಲಿಗಳ ಮೇಲೆ ಈ ಪ್ರಯೋಗ ನಡೆದಿದ್ದು, ದೊಡ್ಡ ಮಟ್ಟದಲ್ಲಿ ಪ್ರತಿಕಾಯ ಸೃಷ್ಟಿಸಿದೆ ಈ ವಾರ್ಮ್ ವ್ಯಾಕ್ಸಿನ್. ಒಂದು ವೇಳೆ ಈ ಲಸಿಕೆಯ ಎಲ್ಲಾ ಹಂತಗಳ ಪ್ರಯೋಗ ನಡೆದು, ಗ್ರೀನ್ ಸಿಗ್ನಲ್ ಸಿಕ್ಕಿಬಿಟ್ರೆ ಲಸಿಕೆ ಸಂಗ್ರಹ, ಅಭಿಯಾನ ಎಲ್ಲವೂ ಸುಲಭವಾಗಲಿದೆ. ಇನ್ನು ಕೋವಿಶೀಲ್ಡ್ ಲಸಿಕೆಗೆ ಯೂರೋಪಿಯನ್ ಮೆಡಿಕಲ್ ಏಜೆನ್ಸಿ ಗ್ರೀನ್ ಸಿಗ್ನಲ್ ನೀಡಿಲ್ಲ. ಆದ್ರೆ ಯೂರೋಪಿನ 16 ದೇಶಗಳು ಕೋವಿಶೀಲ್ಡ್ ಲಸಿಕೆಯನ್ನು ಒಪ್ಪಿಕೊಂಡಿವೆ ಅಂತ ಸೀರಂ ಇನ್​ಸ್ಟಿಟ್ಯೂಟ್ ಮುಖ್ಯಸ್ಥ ಅಡರ್ ಪೂನಾವಾಲಾ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply