ದೇಶದಲ್ಲಿ ಹೊಸ 656 ಕೋವಿಡ್‌ ಕೇಸ್‌ ಪತ್ತೆ! ಕರ್ನಾಟಕ ಎರಡನೇ ಸ್ಥಾನ!

masthmagaa.com:

ದೇಶದಲ್ಲಿ ಕೋವಿಡ್‌ ಕೇಸ್‌ಗಳು ಹೆಚ್ಚಾಗ್ತಿದ್ದು, ಕಳೆದ 24 ಗಂಟೆಗಳಲ್ಲಿ 656 ಹೊಸ ಪ್ರಕರಣಗಳು ರಿಪೋರ್ಟ್‌ ಆಗಿವೆ. ಕೇರಳದಲ್ಲಿ ಒಂದು ಸಾವು ಕೂಡ ಸಂಭವಿಸಿದೆ. ಈ ಮೂಲಕ ಭಾರತದಲ್ಲಿ ಕೋವಿಡ್‌ ಆ್ಯಕ್ಟಿವ್‌ ಕೇಸಸ್‌ 3,742ಕ್ಕೆ ಏರಿಕೆಯಾಗಿದೆ. ಈ ಡೇಟಾವನ್ನ ಕೇಂದ್ರ ಆರೋಗ್ಯ ಸಚಿವಾಲಯ ಪಬ್ಲಿಶ್‌ ಮಾಡಿದೆ. ಇನ್ನು ಈ ಡೇಟಾ ಪ್ರಕಾರ ಡಿಸೆಂಬರ್‌ 23 ರಿಂದ ಕೇರಳದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್‌ ಕೇಸ್‌ ಜಾಸ್ತಿಯಾಗಿವೆ. ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕೇರಳದಲ್ಲಿ ಒಟ್ಟು 128 ಹೊಸ ಕೋವಿಡ್‌ ಪ್ರಕರಣಗಳು ಪತ್ತೆಯಾದ್ರೆ, ಕರ್ನಾಟಕದಲ್ಲಿ ಒಟ್ಟು 104 ಹೊಸ ಕೋವಿಡ್‌ ಕೇಸ್‌ಗಳು ರಿಪೋರ್ಟ್‌ ಆಗಿವೆ. ಈ ಮೂಲಕ ಕರ್ನಾಟಕದಲ್ಲಿರೋ ಆ್ಯಕ್ಟಿವ್‌ ಕೋವಿಡ್‌ ಕೇಸ್‌ಗಳ ಸಂಖ್ಯೆ 272ಕ್ಕೆ ಏರಿಕೆಯಾಗಿದೆ. ಅಲ್ದೇ ಡಿಸೆಂಬರ್‌ 15 ರಿಂದ ಇಲ್ಲಿಯವರೆಗೆ ಕೋವಿಡ್‌ನಿಂದಾಗಿ ಕರ್ನಾಟಕದಲ್ಲಿ ಒಟ್ಟು 4 ಸಾವುಗಳಾಗಿವೆ.

ಇನ್ನು‌ ಸಿಂಗಾಪುರ ಒಳಗೊಂಡ ಆಸಿಯಾನ್ ರಾಷ್ಟ್ರಗಳಲ್ಲಿ ಉಸಿರಾಟದ ಕಾಯಿಲೆಗಳು, ಕೋವಿಡ್‌-19 ಮತ್ತದರ ಸಬ್‌-ವೇರಿಯಂಟ್‌ JN.1 ಮತ್ತು ಇನ್‌ಫ್ಲುಯೆಂಜಾ ಮೇಲೆ ಹೆಚ್ಚಿನ ನಿಗಾ ವಹಿಸಿ ಈ ಬಗ್ಗೆ ರಕ್ಷಣಾ ಕ್ರಮಗಳನ್ನ ತೆಗೆದ್ಕೊಳ್ಳಿ ಅಂತ ವಿಶ್ವ ಆರೋಗ್ಯ ಸಂಸ್ಥೆ (WHO) ಒತ್ತಾಯಿಸಿದೆ. ಕೋವಿಡ್‌-19 ಹೊಸ ರೂಪ ತಾಳೋದು, ಚೇಂಜ್‌ ಆಗೋದು ಮತ್ತು ಎಲ್ಲೆಡೆ ಹರಡೋದನ್ನ ಕಂಟಿನ್ಯೂ ಮಾಡ್ತಿದೆ. ಸದ್ಯ ಸಿಕ್ಕಿರೋ ಎವಿಡೆನ್ಸ್‌ ಪ್ರಕಾರ JN.1 ವೇರಿಯಂಟ್‌ಯಿಂದ ಜನರ ಆರೋಗ್ಯಕ್ಕೆ ರಿಸ್ಕ್‌ ಇರೋದು ತುಂಬಾನೇ ಕಡಿಮೆ. ಆದ್ರೆ ಈ ಹೊಸ ವೇರಿಯಂಟ್‌ ಬಗ್ಗೆ ನಿರ್ಲಕ್ಷ್ಯ ತೋರದೇ, ಟ್ರ್ಯಾಕ್‌ ಮಾಡೋದನ್ನ ಮಾತ್ರ ಕಂಟಿನ್ಯೂ ಮಾಡ್ಬೇಕು. JN.1 ಜಾಗತಿಕವಾಗಿ ಬಹಳ ಸ್ಪೀಡ್‌ನಲ್ಲಿ ಹರಡ್ತಿರೋದ್ರಿಂದ ಇದ್ರ ಬಗ್ಗೆ ಸ್ವಲ್ಪ ಗಮನ ಹರಿಸ್ಬೇಕು. ಆದ್ರಿಂದ ಜನರು ಹುಷಾರಿಲ್ದಾಗ, ಆರೋಗ್ಯ ಕೆಟ್ಹೋದಾಗ ಸೂಕ್ತ ಆರೋಗ್ಯ ಕ್ರಮಗಳನ್ನ ತಗೊಂಡು ಆಸ್ಪತ್ರೆಗೆ ಹೋಗಿ ಟ್ರೀಟ್‌ಮೆಂಟ್‌ ಪಡೀರಿ ಅಂತ WHO ಅಡ್ವೈಸ್‌ ಮಾಡಿದೆ.

-masthmagaa.com

Contact Us for Advertisement

Leave a Reply