ಕೋವಿಶೀಲ್ಡ್​​, ಕೋವ್ಯಾಕ್ಸಿನ್ ಮಿಕ್ಸ್ ಆದ್ರೆ ಒಳ್ಳೆದು: ಐಸಿಎಂಆರ್​​

masthmagaa.com:

ಕೊರೋನಾ ಲಸಿಕೆ ಎರಡು ಡೋಸ್​​​ ಬೇರೆ ಬೇರೆ ಕಂಪನಿಯದ್ದಾದ್ರೆ ಏನಾದ್ರೂ ತೊಂದ್ರೆಯಾಗುತ್ತಾ ಅಂತ ಇಡೀ ವಿಶ್ವದಲ್ಲಿ ಅಧ್ಯಯನ, ಸಂಶೋಧನೆಗಳು ನಡೀತಾ ಇವೆ. ಇದ್ರ ನಡುವೆಯೇ ಈಗ ಐಸಿಎಂಆರ್ ಅಂದ್ರೆ ಇಂಡಿಯನ್ ಕೌನ್ಸಿಲ್ ಮೆಡಿಕಲ್ ಅಸೋಸಿಯೇಷನ್ ನಡೆಸಿರೋ ಅಧ್ಯಯನದ ವರದಿಯೊಂದು ಹೊರಬಿದ್ದಿದೆ. ಅದ್ರಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆ ಮಿಕ್ಸ್ ಆದ್ರೆ ಏನೂ ಆಗೋದಿಲ್ಲ ಅಂತ ಹೇಳಿದೆ. ಅಷ್ಟೇ ಅಲ್ಲ.. ಒಂದೇ ಕಂಪನಿಯ ಎರಡು ಡೋಸ್ ಲಸಿಕೆ ಪಡೆಯೋದಕ್ಕೆ ಹೋಲಿಸಿದ್ರೆ, ಕೋವಿಶೀಲ್ಡ್​​​​ ಮತ್ತು ಕೋವ್ಯಾಕ್ಸಿನ್​​ನ ಒಂದೊಂದು ಡೋಸ್ ಲಸಿಕೆ ಪಡೆಯೋದ್ರಿಂದ ರೋಗ ನಿರೋಧಕ ಶಕ್ತಿ ಜಾಸ್ತಿಯೇ ಆಗುತ್ತೆ ಅಂತ ಕೂಡ ತಿಳಿಸಿದೆ. ಜುಲೈ ತಿಂಗಳಲ್ಲಿ ಡಿಸಿಜಿಐ ಅಂದ್ರೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದ ತಜ್ಞರ ತಂಡವೊಂದು ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್​ ಲಸಿಕೆಗಳ ಮಿಕ್ಸಿಂಗ್ ಬಗ್ಗೆ ಒಂದು ಅಧ್ಯಯನ ನಡೆಸುವಂತೆ ಶಿಫಾರಸು ಮಾಡಿತ್ತು. ಅದ್ರ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಮಿಸ್ ಆಗಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡೂ ಲಸಿಕೆಗಳನ್ನು ಪಡೆದಿದ್ದ 18 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು.

-masthmagaa.com

Contact Us for Advertisement

Leave a Reply