ಕೋವಿನ್ ಆ್ಯಪ್​​ನಲ್ಲಿ ರಿಜಿಸ್ಟರ್ ಮಾಡಿಸಿದ್ರೆ ಮಾತ್ರ ಲಸಿಕೆ!

masthmagaa.com:

18 ವರ್ಷದಿಂದ 45 ವರ್ಷ ಒಳಗಿನವರು ಲಸಿಕೆ ಹಾಕಿಸಿಕೊಳ್ಳಬೇಕಾದ್ರೆ ಸರ್ಕಾರದ ಕೋವಿನ್ ಆ್ಯಪ್​ನಲ್ಲಿ ನೋಂದಣಿ ಮಾಡಿ, ಅಪಾಯಿಂಟ್​ಮೆಂಟ್ ತೆಗೆದುಕೊಳ್ಳೋದು ಕಡ್ಡಾಯವಾಗಿದೆ. ನೇರವಾಗಿ ಹೋಗಿ ಲಸಿಕೆ ಕೇಂದ್ರದಲ್ಲೇ ರಿಜಿಸ್ಟರ್ ಮಾಡಿಸಿ, ಲಸಿಕೆ ಪಡೀತೀನಿ ಅಂದ್ರೆ ಆಗಲ್ಲ.. ಅದಕ್ಕೆ ಅವಕಾಶ ನೀಡಿಲ್ಲ.. ಆರಂಭದಲ್ಲಿ ಕೋವಿನ್ ಆ್ಯಪ್​ನಲ್ಲಿ ನೋಂದಣಿ ಮಾಡಿದವರಿಗೆ ಮಾತ್ರವೇ ಲಸಿಕೆ ಲಭ್ಯವಾಗಲಿದೆ.. 18ರಿಂದ 45 ವರ್ಷದವರೆಗಿನವರು ಹೆಚ್ಚಿನ ಸಂಖ್ಯೆಯಲ್ಲಿ ಬರೋ ಸಾಧ್ಯತೆ ಇರೋದ್ರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕೇಂದ್ರದಲ್ಲೇ ನೋಂದಣಿ ಮಾಡಿ ಲಸಿಕೆ ಹಾಕೋದನ್ನು ಮುಂದುವರಿಸಲಾಗುತ್ತೆ. ಇನ್ನು ಕೋವಿಶೀಲ್ಡ್​ದೇ ಲಸಿಕೆ ರೇಟ್ ಜಾಸ್ತಿಯಾಯ್ತು ಅಂತ ಜನ ಮಾತಾಡ್ತಿದ್ರು. ಈಗ ನೋಡಿದ್ರೆ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರೋ ಕೋವ್ಯಾಕ್ಸಿನ್, ರಾಜ್ಯ ಸರ್ಕಾರಕ್ಕೆ 600 ಮತ್ತು ಖಾಸಗಿ ಆಸ್ಪತ್ರೆಗಳಿಗೆ 1200 ರೂಪಾಯಿ ರೇಟ್ ಫಿಕ್ಸ್ ಮಾಡಿದೆ.

-masthmagaa.com

Contact Us for Advertisement

Leave a Reply